ಕೊಡಗು | ಚೇಲಾವರ ಫಾಲ್ಸ್ ನಲ್ಲಿ ಕೇರಳದ ಮಟ್ಟನೂರು ನಿವಾಸಿ ಯುವಕ ರಶೀದ್ ನೀರುಪಾಲು

ಚೇಲಾವರ ಫಾಲ್ಸ್ ನಲ್ಲಿ ಕೇರಳದ ಯುವಕ ನೀರುಪಾಲಾಗಿದ್ದಾನೆ. ಚೆಯ್ಯಂಡಾಣೆ ಬಳಿಯ ಚೇಲಾವರ ಫಾಲ್ಸ್ ನಲ್ಲಿ ದುರ್ಘಟನೆ ನಡೆದಿದೆ.ಕೇರಳದ ಮಟ್ಟನ್ನೂರು ನಿವಾಸಿ ರಶೀದ್( 25) ಮಹಮ್ಮದ್ ಅಶ್ರಫ್ ಎಂಬುವರ ಪುತ್ರ ಮೃತಪಟ್ಟಿದ್ದಾರೆ.

ಮೂವರು ಸ್ನೇಹಿತರೊಂದಿಗೆ ಚೇಲಾವರ ಜಲಪಾತ ವೀಕ್ಷಣೆಗೆಂದು. ಇಂದು ಆಗಮಿಸಿದ ಸಂದರ್ಭ
ಜಲಪಾತದಲ್ಲಿ ಸ್ನಾನಕ್ಕೆಂದು ಇಳಿದಾಗ ನೀರಿನಲ್ಲಿ ಮುಳುಗಿ ಸಾವು ಜಲಪಾತದಿಂದ ಮೃತದೇಹವನ್ನು ಮೇಲೆತ್ತುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಹಕರಿಸಿದರು.

ನಾಪೋಕ್ಲು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ರೀಧರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Latest Indian news

Popular Stories