ಪೂನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದ ಮುಕ್ಕಟ್ಟೀರ ವಿನಯ್ ಎಂಬುವವರ ಗಬ್ಬದ ಹಸುವಿನ ಮೇಲೆ ಇಂದು ಮುಂಜಾನೆ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದ ಘಟನೆ ನಡೆದಿದೆ. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ.
ಕಳೆದ 20 ದಿನಗಳ ಹಿಂದೆ ಹರಿಹರ ಗ್ರಾಮದ ದೇವಾಲಯದ ಬಳಿಯ ಕೆರೆಯಲ್ಲಿ ಹುಲಿ ಪತ್ತೆಯಾಗಿತ್ತು ನಂತರ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು. ಹುಲಿ ಪತ್ತೆಯಾಗಿರಲಿಲ್ಲ. ಇದೀಗ ಮತ್ತೆ ಹರಿಹರ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡು ಈ ಭಾಗದ ಜನರಲ್ಲಿ ಭೀತಿ ಮೂಡಿಸಿದೆ.