ಮಡಿಕೇರಿಯಲ್ಲಿ ಯೋಧನ ಆತ್ಮಹತ್ಯೆ ಪ್ರಕರಣ: ಆರೋಪಿ ಸತ್ಯ ವಿದೇಶಕ್ಕೆ ಪರಾರಿ ಶಂಕೆಯಿದ್ದು ಸ್ವದೇಶಕ್ಕೆ ಮರಳಿದಾಕ್ಷಣ ಬಂಧನ ಎಸ್ಪಿ ರಾಮರಾಜನ್ ಸ್ಪಷ್ಟನೆ

ಇತ್ತೀಚಿಗೆ ಮಡಿಕೇರಿಯ ಪಂಪ್ ವೆಲ್ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯೋಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯೋಧ ಬರೆದಿಟ್ಟ ಡೆತ್ ನೋಟಿನಲ್ಲಿದ್ದ ವ್ಯಕ್ತಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಇನ್ನುಳಿದಂತೆ ಆರೋಪಿಗಳಾದ ಸತ್ಯ ಹಾಗೂ ಸತೀಶ ಎಂಬುವವರನ್ನು ಬಂಧಿಸಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್ ಮಾಹಿತಿ ನೀಡಿದ್ದಾರೆ. ಈಗಾಗಲೇ ವಿಶೇಷ ತಂಡ ರಚಿಸಲಾಗಿದ್ದು ಇವರ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸತ್ಯ ಎಂಬುವವರು ವಿದೇಶಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಇದ್ದು ಅವರು ಭಾರತಕ್ಕೆ ಬಂದ ತಕ್ಷಣ ಅವರನ್ನು ಬಂಧಿಸಲಾಗುವುದು ಎಂದರು. ಪೊಲೀಸ್ ಸತೀಶ ಎಂದು ಡೆತ್ ನೋಟ್ ನಲ್ಲಿ ನಮೂದಿಸಲಾಗಿದ್ದು ಇಲಾಖೆಯಲ್ಲಿ ಹಲವು ಮಂದಿ ಸತೀಶ ಎಂಬುವವರಿದ್ದು ನಿರ್ದಿಷ್ಟವಾಗಿ ಯಾವ ಸತೀಶ ಎಂಬುದನ್ನು ಅವರ ಕುಟುಂಬ ವರ್ಗದ ಸದಸ್ಯರು ಅಥವಾ ಇದರ ಬಗ್ಗೆ ತಿಳಿದಿರುವ ಸಾರ್ವಜನಿಕರು ನಮಗೆ ಮಾಹಿತಿ ನೀಡಿದರೆ ಅವರ ಹೆಸರನ್ನು ಗೌಪ್ಯವಾಗಿಟ್ಟು ಆರೋಪಿಯನ್ನು ಬಂಧಿಸಲಾಗುವುದು ಎಂದು ಅವರು ಇಂದು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Latest Indian news

Popular Stories