ಭ್ರಷ್ಟ ನಾಯಕರಿಗೆ ಸಹಕರಿಸುವುದು ಕಾಂಗ್ರೆಸ್‌ನ ಸಂಸ್ಕೃತಿ : ಕೇಂದ್ರ ಸಚಿವ ಖೂಬಾ

ಬೀದರ್: ಸಂಸದ ಧೀರಜ್ ಸಾಹು ಮನೆಯಲ್ಲಿ 300 ಕೋಟಿಗೂ ಅಧಿಕ ಹಣ ಪತ್ತೆ ಹಿನ್ನಲೆ ಬಿಜೆಪಿ ಪ್ರತಿಭಟನೆ ಕೇಂದ್ರ ಸಚಿವ ಖೂಬಾ ಭಾಗಿ

ಕಾಂಗ್ರೆಸ್ ಪಕ್ಷದ ಸಂಸದ ಧೀರಜ್ ಸಾಹು ಅವರ ಮನೆಯಲ್ಲಿ IT ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸುಮಾರು 300 ಕೋಟಿಗೂ ಅಧಿಕ ಹಣ ಪತ್ತೆಯಾಗಿದ್ದು ಇದರ ಹಿನ್ನಲೆಯಲ್ಲಿ ಇಂದು ನಗರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದ್ದರು.

ಇದೇ ವೇಳೆ ಪ್ರತಿಭಟನೆ ಯಲ್ಲಿ ಭಾಗಿಯಾದ ಕೇಂದ್ರ ಸಚಿವ ಭಗವಂತ ಖೂಬಾ ಕಾಂಗ್ರೆಸ್‌ ಸಂಸದನ ಮನೆಯಲ್ಲಿ ಸಿಕ್ಕ ಹಣದ ವಿಚಾರವಾಗಿ ಕಾಂಗ್ರೆಸ್‌ನ ಯಾವ ನಾಯಕರು ಚಕಾರ ಎತ್ತುತ್ತಿಲ್ಲಾ. ಇದರಿಂದ ಭ್ರಷ್ಟ ನಾಯಕರಿಗೆ ಸಹಕರಿಸುವುದು ಕಾಂಗ್ರೆಸ್‌ನ ಸಂಸ್ಕೃತಿ ಆಗಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆದ್ರೆ ದೇಶದ ಪ್ರಧಾನಿ ಮೋದಿ ಅವರು, ದೇಶದಲ್ಲಿ ಯಾವುದೇ ಭ್ರಷ್ಟರನ್ನ ಬಿಡಲ್ಲಾ. ಭ್ರಷ್ಟ ನಾಯಕರನ್ನ ಕೊನೆಗಾಣಿಸುವ ಸ್ಪಷ್ಟ ಸಂದೇಶವನ್ನ ಪ್ರಧಾನಿ ಮೋದಿ ಕೊಟ್ಟಿದ್ದಾರೆ ಎಂದು ಖೂಬಾ ಹೇಳಿದರು.

ಈ ಪ್ರತಿಭಟನೆಯಲ್ಲಿ ಶೈಲೇಂದ್ರ ಬೇಲ್ದಾಳೆ, ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಸೇರಿದಂತೆ ಹಲವು ಕಾರ್ಯಕರ್ತರು ಭಾಗಿಯಾಗಿದ್ದರು.

Latest Indian news

Popular Stories