ಕೊಡಗು: ಗುಂಡು ಹೊಡೆದು ಪತ್ನಿಯ ಹತ್ಯೆ

ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದಲ್ಲಿ ಪತಿಯೋರ್ವ ಗುಂಡು ಹೊಡೆದು ಪತ್ನಿಯ ಹತ್ಯೆಗೈದಿದ್ದಾನೆ.

ಬೋಪಣ್ಣ ಎಂಬಾತ ತನ್ನ ಪತ್ನಿ ಶಿಲ್ಪಾ (40) ಎಂಬಾಕೆಯನ್ನು ಹತ್ಯೆ ಮಾಡಿರುವ ಆರೋಪಿಯಾಗಿದ್ದಾನೆ.

ಕೃತ್ಯದ ಬಳಿಕ ಬೋಪಣ್ಣ ಕೋವಿ ಸಮೇತ ಪೋಲೀಸ್ ಠಾಣೆಗೆ ಶರಣಾಗಿದ್ದಾನೆ.ಘಟನಾ ಸ್ಥಳಕ್ಕೆ ವಿರಾಜಪೇಟೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯ ಹಿನ್ನೆಲೆ ಇನ್ನಷ್ಟೇ ಬೆಳಕಿಗೆ ಬರಲಿದೆ

Latest Indian news

Popular Stories