ವಿರಾಜಪೇಟೆ ಕೊಡವ ಸಮಾಜದ ನೂರಾಂಡ ನಮ್ಮೆಯ ಸಭೆಯಲ್ಲಿ ಬುರುಡೆ ಬಿಟ್ಟ ಪ್ರತಾಪ್ ಸಿಂಹ ಅವರಿಗೆ ವೇದಿಕೆಯಲ್ಲಿ ಆಕ್ಷೇಪ ವ್ಯಕ್ತ ಪಡಿಸಿದ ಮಾನ್ಯ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಜನರ ಮಧ್ಯೆ ಶಾಸಕರ ಸುಳ್ಳಿಗೆ ಪ್ರತಿಕ್ರಿಯಿಸಿದರು.
ತಮ್ಮ ಭಾಷಣದಲ್ಲಿ ಸಂಸದ ಪ್ರತಾಪ್ ಸಿಂಹ ರವರು ಬೊಮ್ಮಾಯಿ ಸರ್ಕಾರ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ 10 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಭಾಷಣ ಮಾಡಿ ಹೇಳಿದಾಗ ಒಂದು ರುಪಾಯಿ ಕೂಡ ಬಿಡುಗಡೆ ಮಾಡಿಲ್ಲ.ಸುಳ್ಳು ಹೇಳಬೇಡಿ ಎಂದು ಎ.ಎಸ್.ಪೊನ್ನಣ್ಣ ಆಕ್ಷೇಪ ವ್ಯಕ್ತಪಡಿಸಿದರು.ಸಂಸದರು ತಮ್ಮ ಭಾಷಣವನ್ನು ಬೇರೆಡೆಗೆ ತಿರುಗಿಸಿ ಮಾತು ತಿರುಗಿಸಿದ ಘಟನೆ ನಡೆಯಿತು.