ಕೊಡಗು: MRI ಸ್ಕ್ಯಾನಿಂಗ್ ಘಟಕ ಹಾಗೂ ತಂತ್ರಾಂಶ ಮಂಜೂರು

ಕೊಡಗಿನ ಜನರ ಹಲವಾರು ವರ್ಷಗಳ ಬೇಡಿಕೆಯಾಗಿದ್ದ MRI ಸ್ಕ್ಯಾನಿಂಗ್ ಘಟಕವನ್ನು ಹಾಗೂ ತಂತ್ರಾಂಶವನ್ನು ಶಾಸಕ ಡಾ. ಮಂತರ್ ಗೌಡ ಅವರ ಪರಿಶ್ರಮದಿಂದ ಮಡಿಕೇರಿ ಜಿಲ್ಲಾಸ್ಪತ್ರೆಗೆ ಮಂಜೂರು ಮಾಡಲಾಗಿದೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಅಧೀನ ಜಿಲ್ಲಾ ಆಸ್ಪತ್ರೆಗೆ ಸಾರ್ವಜನಿಕ – ಖಾಸಗಿ ಸಹಭಾಗಿತ್ವ MRI ಸ್ಕ್ಯಾನಿಂಗ್ ಕೇಂದ್ರವನ್ನು ಹಾಗೂ ವೈದ್ಯಕೀಯ ಉಪಕರಣ ಮಂಜೂರು ಮಾಡುವ ಬಗ್ಗೆ ಮಾನ್ಯ ಶಾಸಕ ಡಾ. ಮಂತರ್ ಗೌಡ ಅವರಿಂದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರಿಗೆ ಹಲವು ಭಾರಿ ಸಭೆ ನಡೆಸಿ ಮನವಿಗಳನ್ನು ನೀಡಲಾಗಿತ್ತು.

ಕೊಡಗು ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆ / ಆಸ್ಪತ್ರೆಗಳಲ್ಲಿ MRI ಸ್ಕ್ಯಾನಿಂಗ್ ಇಲ್ಲದೆ ಇರುವುದರಿಂದ ರೋಗಿಗಳು ಸ್ಕ್ಯಾನಿಂಗ್ ಗಾಗಿ ಇತರೆ ದೂರದ ಜಿಲ್ಲೆಗಳಾದ ಮೈಸೂರು, ಮಂಗಳೂರು, ಹಾಸನ, ಬೆಂಗಳೂರು ನಗರಗಳನ್ನು ಅವಲಂಬಿಸಲಾಗುತ್ತಿದ್ದು, ಎಂ.ಆರ್.ಐ ಸ್ಕ್ಯಾನಿಂಗ್ ಸೌಲಭ್ಯವಿಲ್ಲದೆ ಇರುವುದರಿಂದ ಕೊಡಗು ಜಿಲ್ಲೆಯಲ್ಲಿ ತೀವ್ರವಾದ ತೊಂದರೆಯಾಗುತಿತ್ತು.

ಇತ್ತೀಚೆಗೆ ಜರುಗಿದ 2023-24 ನೇ ಸಾಲಿನ ರಾಜ್ಯ ಆಯವ್ಯಯ ಎಲ್ಲಾ ಜಿಲ್ಲೆಯ ಜಿಲ್ಲಾ ಆಸ್ಪತ್ರೆಗಳಲ್ಲಿ ಸಾರ್ವಜನಿಕ – ಖಾಸಗಿ ಸಹಾಭಾಗಿತ್ವದಲ್ಲಿ MRI ಸ್ಕ್ಯಾನಿಂಗ್ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿತ್ತು. ಅದರಂತೆ ದಿನಾಂಕ 10-08-23 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ 15 ಜಿಲ್ಲಾ ಆಸ್ಪತ್ರೆಗೆ MRI ಮಂಜೂರಾಗಿದ್ದು ಕೊಡಗು ಜಿಲ್ಲೆಗೆ ಮಂಜೂರಾಗಿರುವುದಿಲ್ಲ.

ಆದರೂ ಸಹ ಮಾನ್ಯ ಶಾಸಕರು ಈ ಸಂಭಂದವಾಗಿ ಬೆಂಗಳೂರುಗೆ ಸಾಕಷ್ಟು ಭಾರಿ ತೆರಳಿ ಈ ವಿಚಾರವಾಗಿ ಸಂಭಂದ ಪಟ್ಟ ಸರ್ಕಾರದ ಇಲಾಖೆಯ ಪದಾಧಿಕಾರಿಗಳು ಹಾಗೂ ಅಧಿಕಾರಿಗಳೊಡನೆ ನಿರಂತವಾಗಿ ಸಭೆಗಳನ್ನು ನಡೆಸುತ್ತಾ ಕೊನೆಗೂ ಈ ದಿನ MRI ಸ್ಕ್ಯಾನಿಂಗ್ ಕೇಂದ್ರ ಹಾಗೂ ತಂತ್ರಾಂಶವನ್ನು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಡಿಕೇರಿಯ ಅದೀನ ಜಿಲ್ಲಾ ಆಸ್ಪತ್ರೆಗೆ ಮಂಜೂರು ಮಾಡಿ ತರುವಲ್ಲಿ ( Install ) ಯಶಸ್ವಿಯಾಗಿದ್ದಾರೆ.

Latest Indian news

Popular Stories