ನಾಗರಹೊಳೆಯ ಕೊಟ್ರಂಗಡ ಚಿಣ್ಣಪ್ಪ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.ನಾಗರಹೊಳೆ ರಕ್ಷಣೆಗೇ ಜೀವ ಮುಡಿಪಾಗಿಟ್ಟಿದ್ದ ಚಿಣ್ಣಪ್ಪ ಕಾಡಿನ ಸಂರಕ್ಷಣೆಗಾಗಿ ಅನೇಕ ಪ್ರಶಸ್ತಿ ಸಂದಿದ್ದವು.
ಕೆಲವು ವಷ೯ಗಳ ಹಿಂದೆ ದುಷ್ಕಮಿ೯ಗಳು ನಾಗರಹೊಳೆಗೆ ಬೆಂಕಿಯಿಟ್ಟಿದ್ದಾಗ ಚಿಣ್ಣಪ್ಪ ಕಾಡು ರಕ್ಷಣೆಗೆ ಜೀವಪಣವಾಗಿಟ್ಟು ಹೋರಾಡಿದ್ದರು.ನಾಗರಹೊಳೆ ಅರಣ್ಯಾಧಿಕಾರಿಯಾಗಿಯೂ ಚಿಣ್ಣಪ್ಪ ಕತ೯ವ್ಯ ಸ್ಮರಣೀಯ.84 ವಷ೯ದ ಕೆ.ಎಂ.ಚಿಣ್ಣಪ್ಪ ಕೆಲಕಾಲದ ಅನೋರೋಗ್ಯದ ಬಳಿಕ ಇಂದು ಮಧ್ಯಾಹ್ನ 11.20 ಗಂಟೆಗೆ ಕೊನೆಯುಸಿರೆಳೆದರು.
ನಾಗರಹೊಳೆ ಸೇರಿದಂತೆ ಭಾರತದ ಕಾಡುಗಳ ಬಗ್ಗೆ ಅಪೂವ೯ ಮಾಹಿತಿಯನ್ನು ಹೊಂದಿದ್ದರು. ಚಿಣ್ಣಪ್ಪ ಅರಣ್ಯ ವಿಚಾರದಲ್ಲಿ ನಡೆದಾಡುವ ಕೋಶದಂತೆ ಜೀವಿಸಿದ್ದರು ಕೊಡಗಿನ ಚಿಣ್ಣಪ್ಪ
ನಾಳೆ ಪೊನ್ನಂಪೇಟೆ ತಾಲ್ಲೂಕಿನ ಕಾಕೂರು ಗ್ರಾಮದ ಸ್ವಗೃಹದಲ್ಲಿ ಚಿಣ್ಣಪ್ಪ ಅಂತ್ಯಕ್ರಿಯೆ ನೆರವೇರಲಿದೆ.