ಪ್ರತಾಪ್ ಸಿಂಹ ಸಂಪೂರ್ಣವಾಗಿ ಸಹಕರಿಸುವ ಭರವಸೆ ನೀಡಿದ್ದಾರೆ: ಯದುವೀರ್

ಬೆಂಗಳೂರು : ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಒಡೆಯರ್, ಕಳೆದ ಎರಡು ಅವಧಿಗಳಿಗೆ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರು ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿ ಸಮಾಜದ ಎಲ್ಲ ವರ್ಗಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಉತ್ತಮ ತಳಹದಿಯನ್ನು ಹಾಕಿದ್ದಾರೆ, ಅವರು ಮಾಡಿರುವ ಎಲ್ಲ ಉತ್ತಮ ಕೆಲಸಗಳನ್ನು ತಾವು ಮುಂದುವರಿಸಿಕೊಂಡು ಹೋಗೋದಾಗಿ ಹೇಳಿದರು.

ಅಧಿಕೃತವಾಗಿ ಪ್ರತಾಪ್ ಸಿಂಹ ಅವರು ಯದುವೀರ್ ಅವರಿಗೆ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಹೇಳಿದರೂ ಅವರು ಬೆಂಬಲಿಗರು ಅನ್ಯಮನಸ್ಕರಾಗಿದ್ದಾರೆ ಮತ್ತು ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ, ಹಾಗಾಗಿ ತಮಗೆ ಸಮಸ್ಯೆ ಆಗಲ್ವಾ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯದುವೀರ್, ಅಂಥದ್ದೇನೂ ಸಂಭವಿಸಲಾರದು, ಪ್ರತಾಪ್ ಸಿಂಹ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ, ಅವರು ಸಂಪೂರ್ಣ ಸಹಕಾರ ನೀಡೋದಾಗಿ ಹೇಳಿರುವುದರಿಂದ ಅವರ ಬೆಂಬಲಿಗರು ತಮಗೆ ಅಡ್ಡಿಪಡಿಸಲಾರರು ಎಂದರು.

Latest Indian news

Popular Stories