ಕೊಪ್ಪಳ :ಹುಚ್ಚುನಾಯಿ ದಾಳಿ; 10 ಜನರಿಗೆ ಗಂಭೀರ ಗಾಯ

ಕೊಪ್ಪಳ: ಹುಚ್ಚುನಾಯಿಯೊಂದು ದಾಳಿ ನಡೆಸಿ ಹತ್ತು ಜನರು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಗಜೇಂದ್ರಗಡ ರಸ್ತೆಯ ಮುದ್ದಾನೇಶ್ವರ ಮಠದಲ್ಲಿ ನಡೆದಿದೆ.

ಹುಚ್ಚುನಾಯಿ ದಾಳಿಗೆ ಬಾಲಕ ಸೇರಿ 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ಸಾರ್ವಜನಿಕರು ನಾಯಿಯನ್ನು ಹಿಡಿದು ಕೊಂದಿದ್ದಾರೆ.ಗಾಯಾಳುಗಳನ್ನು ಕುಷ್ಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ, ಮಹಿಳೆ ಸೇರಿದಂತೆ ಹತ್ತು ಜನರಿಗೆ ನಾಯಿ ಕಚ್ಚಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Latest Indian news

Popular Stories