ಬಿಕೆ ಹರಿಪ್ರಸಾದ ರನ್ನು ಮೂಲೆಗುಂಪು ಮಾಡಲಾಗುತ್ತಿದೆ : ಸಿಎಂ ವಿರುದ್ಧ ಪ್ರಣವಾನಂದಶ್ರೀ ಕಿಡಿ

ಕೊಪ್ಪಳ : ಬೆಂಗಳೂರಿನಲ್ಲಿ ಈಡಿಗ ಸಮಾವೇಶ ಆ ಯೋಜನೆ ಮಾಡಲಾಗಿದ್ದು ಈ ವಿಚಾರವಾಗಿ ಬಿಕೆ ಹರಿಪ್ರಸಾದ ರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಪ್ರಣವಾನಂದ ಸ್ವಾಮೀಜಿ ಕಿಡಿ ಕಾರಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದ ನಾಯಕನಾಗಿ ಬೆಳೆಯದಂತೆ ಮೂಲೆಗುಂಪು ಮಾಡುತ್ತಿದ್ದಾರೆ.

ಉದ್ದೇಶಪೂರ್ವಕವಾಗಿ ಹರಿಪ್ರಸಾದ್ ಅವರನ್ನು ಸಮಾವೇಶದಿಂದ ದೂರವಿಡಲಾಗಿದೆ.ಮಧು ಬಂಗಾರಪ್ಪ ಬಳಸಿಕೊಂಡು ಈಡಿಗ ಸಮಾಜ ಹೊಡೆಯಲು ಸಿಎಂ ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ

ಈಡಿಗ ಬಿಲ್ಲವ ಹಾಗೂ ನಾಮಧಾರಿ ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಪ್ರಣವಾನಂದ ಸ್ವಾಮೀಜಿ ಸೇರಿದಂತೆ ಹಲವರ ಸಮ್ಮುಖದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಆ ಯೋಜನೆ ಮಾಡಲಾಗಿದೆ. ಇತ್ತ ಬಿಕೆ ಹರಿಪ್ರಸಾದ್ ಕೂಡ ರಾಜಕೀಯ ಕುತಂತ್ರಕ್ಕಾಗಿ ಸಮುದಾಯ ಸಮಾವೇಶ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

Latest Indian news

Popular Stories