ಕೊಪ್ಪಳ: ಶಾಲಾ ಬಸ್ಸಿಗೆ ಸಿಲುಕಿ ಮೂರು ವರ್ಷದ ಮಗು ಸಾವು


ಕೊಪ್ಪಳ (ಕುಷ್ಟಗಿ) : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ, ಶಾಲಾ ಬಸ್ಸಿನ ಗಾಲಿಗೆ ಸಿಲುಕಿ 3 ವರ್ಷದ ಮಗುವೊಂದು ಸಾವನ್ನಪ್ಪಿದ ಘಟನೆ ತಾಲೂಕಿನ ಗೋತಗಿ ಗ್ರಾಮದಲ್ಲಿ ನಡೆದಿದೆ.

IMG 20230709 WA0032 Koppal


ಮೃತ ಮಗುವನ್ನು ಅದೇ ಗ್ರಾಮದ ಬಸವರಾಜ ಬಾವಿಕಟ್ಟಿ ಅವರ ಮಗಳಾದ ಚೈತ್ರಾ (03) ಎಂದು ಗುರುತಿಸಲಾಗಿದ್ದು .
ಓತಗೇರಿ ಗ್ರಾಮದ ಖಾಸಗಿ ಪ್ರಾಥಮಿಕ ಶಾಲೆಯ ಬಸ್ಸು ಗೋತಗಿ ಗ್ರಾಮದ ಮಕ್ಕಳಿಗೆ ಶಾಲೆಗೆ ಕರೆದೊಯ್ಯುಲು ಆಗಮಿಸಿದ ಸಂದರ್ಭದಲ್ಲಿ ತನ್ನ ಅಕ್ಕನನ್ನು ಬಸ್ಸಿಗೆ ಹತ್ತಿಸಲು ಬಂದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಕುರಿತಂತೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಮೃತ ದೇಹವನ್ನು, ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಂದಿದೆ.

Latest Indian news

Popular Stories