ಜಮಾಅತೆ ಇಸ್ಲಾಮಿ ಹಿಂದ್ ಕೊಡಗು ವತಿಯಿಂದ ಮನೆ ಹಸ್ತಾಂತರ

ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಇತರ ದಾನಿಗಳ ಸಹಯೋಗದೊಂದಿಗೆ ನಿರ್ಮಿಸಿರುವ ಮನೆಗಳಲ್ಲಿ ಒಂದಾದ ಮನೆಯೊಂದನ್ನು ಜಮಾಅತೆ ಇಸ್ಲಾಮೀ ಹಿಂದ್ ಕೊಡಗು ಇದರ ಜಿಲ್ಲಾಧ್ತಕ್ಷರಾದ ಪಿ .ಕೆ ಅಬ್ದುಲ್ ರೆಹಮಾನ್ ಫಲಾನುಭವಿಗೆ ಹಸ್ತಾಂತರಿಸಿದರು.

ನಂತರ ಮಾತಾನಾಡಿದ ಅವರು, ಇಂದು ದೇಶದಲ್ಲಿ ಹಲವಾರು ಮಂದಿ ವಸತಿ ಸೌಲಭ್ಯ ವಿಲ್ಲದೇ ಪರಿತಪಿಸುತ್ತಿದ್ದಾರೆ. ಸರ್ಕಾರ ಗಮನಹರಿಸದೇ ಇರುವುದು ವಿಷಾದನೀಯ. ಅದೇ ರೀತಿ ಸರ್ಕಾರ ಅರ್ಹರನ್ನು ಗುರುತಿಸುವುದರಲ್ಲಿ ವಿಫಲಾವಾಗುತ್ತಿದೆ.ಇಂತಹ ಸಂಧರ್ಭದಲ್ಲಿ ಸಂಘ ಸಂಸ್ಥೆಗಳು ಮಾನವೀಯ ಕಾರ್ಯಕ್ಕೆ ಮುಂದಾಗಿರುವುದು ಆಶಾದಾಯಕ ಬೆಳವಣಿಯಾಗಿದೆ ಎಂದರು.

ದೇಶದ ಯವುದೇ ಪ್ರದೇಶದಲ್ಲಿ ಪ್ರಕೃತಿ ಮುನಿಸಿದರೂ .ವಿಶೇಷವಾಗಿ ಮಡಿಕೇರಿ.ಪ್ರಧೇಶ ಇದರ ಪರಿಣಾಮ ಎದುರಿಸುತ್ತದೆ..ಇಂತಹ ಸಂಧರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಇದರ ಸೇವಾ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್ ಎಸ್ ಎಫ್ ಜಿಲ್ಲಾ ಸಂಘಟನಾ ಸದಸ್ಯರು ಹಾಗೂ ಮಡಿಕೇರಿ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾದ ಖಲೀಲ್ ಭಾಷ ಶುಭ ಹಾರೈಸಿದರು.

ತನಲ್ ಆಶ್ರಮದ ಅಧ್ಯಕ್ಷರು ಮೊಹಮ್ಮದ್ ಮುಸ್ತಪ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಇಂದು ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಏಳು ಮನೆಗಳನ್ನು ಫಲಾನುಬವಿಗಳಿಗೆ ಹಸ್ತಾಂತರಿಸಲಾಗುತ್ತಿದೆ ಇದಕ್ಕಾಗಿ ಸಹಕರಿಸಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಸಿದ್ದಾಪುರದ ಸಮಾಜ ಸೇವಕರಾದ ಅಶ್ರಪ್ ಕುಞಾನ್ ಧಾನಿಗಳಾದ ನಾಸರ್ ಮಾಹೆ, ,ಮಡಿಕೇರಿ ಘಟಕದ ಸಮಾಜ ಸೇವಕ ಪಿ.ಎಂ ಉಮ್ಮರ್ ಸ್ತಾನೀಯ ಕಾರ್ಯದರ್ಶಿ ಅಹ್ಮದ್ ಕಬೀರ್..ಹಾಗೂ ಮಸ್ಜಿದ್ ಉರ್ ರಹ್ಮಾನ್ ಮಸೀದಿ ಖತೀಬರಾದ ಜ] ಉಮರ್ ಮೌಲವಿ ಯವರು ಉಪಸ್ಥಿತರಿದ್ದರು..

Latest Indian news

Popular Stories