ಬೈಕ್ ಕಳವು ಪ್ರಕರಣ : ಸೋಮವಾರಪೇಟೆ ಪೊಲೀಸರಿಂದ ಇಬ್ಬರ ಬಂಧನ

ಮಡಿಕೇರಿ ಮಾ.22 : ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೆÇಲೀಸರು ಯಶಸ್ವಿಯಾಗಿದ್ದಾರೆ.


ಬಂಧಿತರನ್ನು ಕೊಣನೂರು ಕೇರೆಬೇಲಿಯ ಇರ್ಫಾನ್ (22) ಹಾಗೂ ಕುಶಾಲನಗರ ಕರಿಯಪ್ಪ ಬಡಾವಣೆಯಯು.ಬಿ.ಕೀರ್ತನ್(24) ಎಂದು ಗುರುತಿಸಲಾಗಿದೆ.


ಇತ್ತೀಚೆಗೆ ಸೋಮವಾರಪೇಟೆ ಜೂನಿಯರ್ ಕಾಲೇಜು ಹತ್ತಿರ ಕಬ್ಬಡಿ ಪಂದ್ಯಾವಳಿ ನಡೆಯುತ್ತಿದ್ದ ಸಂದರ್ಭ ನಿಲ್ಲಿಸಿದ್ದ ಬೈಕನ್ನು ಯಾರೋ ಕಳ್ಳರು ಕದ್ದೊಯ್ದಿರುವುದಾಗಿ ಸೋಮವಾರಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಈ ಬಗ್ಗೆ ಕಾರ್ಯ ಪ್ರವೃತ್ತರಾದ ಸೋಮವಾರಪೇಟೆ ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಗಳು ಸರಣಿ ಬೈಕ್ ಕಳವು ಮಾಡುತ್ತಿದ್ದ ಆರೋಪಿಗಳನ್ನು ಪತ್ತೆ ಮಾಡಿ ಕಳುವಾಗಿದ್ದ 1.30ಲಕ್ಷ ರೂ.

ಮೌಲ್ಯದ ಪಲ್ಸರ್ ಹಾಗೂ ಬೆಟ್ಟದಪುರ ಪೆÇಲೀಸ್ ಠಾಣೆಯಲ್ಲಿ ಕಳುವಾಗಿದ್ದ ಯಮಹ ಬೈಕ್ ಸೇರಿ 2 ಬೈಕ್‍ಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಆರೋಪಿಗಳ ವಿರುದ್ಧ ಸೋಮವಾರಪೇಟೆ ಹಾಗೂ ಬೆಟ್ಟದಪುರ ಪೆÇಲೀಸ್ ಠಾಣೆಗಳಲ್ಲಿ ಬೈಕ್ ಕಳವು ಪ್ರಕರಣ ದಾಖಲಿಸಲಾಗಿದೆ.


ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನ ಹಾಗೂ ಸೋಮವಾರಪೇಟೆ ಉಪ ವಿಭಾಗದ ಪೆÇಲೀಸ್ ಉಪ ಅಧೀಕ್ಷಕ ಹೆಚ್.ಎಂ. ಶೈಲೇಂದ್ರ,ಅವರ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಎಂ.

ಮಹೇಶ್, ಸೋಮವಾರಪೇಟೆ ವೃತ್ತ ನಿರೀಕ್ಷಕ ಮಹೇಶ್ ಬಿ.ಜಿ.ಹಾಗೂ ಕುಶಾಲನಗರ ಟೌನ್ ಪಿ ಎಸ್ ಐ ಗಣೇಶ್, ಸೋಮವಾರಪೇಟೆ ಪೆÇಲೀಸ್ ಠಾಣೆಯ ಪಿ.ಎಸ್.ಐ.

ಶ್ರೀಧರ್.ಎಂ.ಸಿ., ಸಹಾಯಕ ಪೆÇಲೀಸ್ ಉಪ ನಿರೀಕ್ಷಕಿ ಖತೀಜಾ, ಸಿಬ್ಬಂದಿಗಳಾದ ಶಿವಕುಮಾರ್, ಪ್ರವೀಣ್, ಬಸಪ್ಪ, ಚಾಲಕ ಹರ್ಷಿತ್ ಹಾಗೂ ಉಪ ವಿಭಾಗದ ಕ್ರೈಂ ಸಿಬ್ಬಂದಿ ಗಳಾದ ಗೋಪಾಲ್ ಎ.ಎಸ್.ಐ.

ದಯಾನಂದ್, ಸಜಿ, ಸುಧೀಶ್, ರಂಜಿತ್ ಹಾಗೂ ಸಿಡಿಆರ್ ಘಟಕದ ಗಿರೀಶ್ ಮತ್ತು ರಾಜೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.


ಪೆÇಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರು, ವಾಹನ ಮಾಲೀಕರು ತಮ್ಮ ವಾಹನಗಳನ್ನು ರಾತ್ರಿ ಸಮಯದಲ್ಲಿ ಮನೆಯ ಹೊರಗೆ ನಿಲ್ಲಿಸದೆ ಶೆಡ್ಡಿನಲ್ಲಿ ನಿಲ್ಲಿಸಿಕೊಂಡು ಮುಂಜಾಗ್ರತೆ ವಹಿಸಬೇಕೆಂದು ಸಲಹೆ ನೀಡಿದ್ದಾರೆ.

Latest Indian news

Popular Stories