ಪಕ್ಷೇತರ ಅಭ್ಯರ್ಥಿಗೆ ಆಪ್ ಬೆಂಬಲ

ರಾಯಚೂರು: ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ನಾರಾ ಪ್ರತಾಪ ರೆಡ್ಡಿ ಅವರಿಗೆ ಆಮ್ ಆದ್ಮಿ ಪಾರ್ಟಿ (ಆಪ್) ಯಿಂದ ಬೆಂಬಲ ನೀಡಲಾಗುವುದು ಎಂದು ಆಪ್ ಜಿಲ್ಲಾ ಘಟಕದ ಅಧ್ಯಕ್ಷ ವಕೀಲ ವೀರೇಶಕುಮಾರ ಯಾದವ್ ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಲ್ಲಿ ಸೋತಿದ್ದ ನಾರಾ ಪ್ರತಾಪರೆಡ್ಡಿಯವರು ಪದವಿಧರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಮತ್ತೇ ಈ ಬಾರಿ ಸ್ಪರ್ಧೆ ಮಾಡಿದ್ದಾರೆ. ಈಶಾನ್ಯ ಪದವಿಧರ ಕ್ಷೇತ್ರ ಏಳು ಜಿಲ್ಲೆಗಳಲ್ಲೂ ಅವರ ಪರವಾಗಿ ಆಮ್ ಆದ್ಮಿ ಪಕ್ಷವೂ ಕಾರ್ಯನಿರ್ವಹಿಸಲಿದೆ. ಅವರು ಚುನಾಯಿತರಾದರೆ ಪದವಿಧರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಈ ವೇಳೆ ಪಕ್ಷದ ಮುಖಂಡರಾದ ಈರೇಶ, ಇಸಾಕ್, ದೇವರೆಡ್ಡಿ, ಶಂಕರ ಖಾನಾಪೂರ ಉಪಸ್ಥಿತರಿದ್ದರು.

Latest Indian news

Popular Stories