
ಮಡಿಕೇರಿ ಏ.೨೩ : Forest fire case ಆಕಸ್ಮಿಕವಾಗಿ ದೇವರಬನಕ್ಕೆ ಬೆಂಕಿ ತಗುಲಿದ ಪ್ರಕರಣಕ್ಕೆ ಸಂಬAಧಿಸಿದAತೆ ವ್ಯಕ್ತಿಯೊಬ್ಬರಿಂದ ಲಂಚದ ರೂಪದಲ್ಲಿ ಹಣ ಸ್ವೀಕರಿಸುತ್ತಿದ್ದ ಇಬ್ಬರು ಅರಣ್ಯ ಇಲಾಖೆ ನೌಕರರನ್ನು ಕೊಡಗು ಜಿಲ್ಲಾ ಭಷ್ಟಾಚಾರ ನಿಗ್ರಹ ದಳ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಗಾಳಿಬೀಡು ಬೀಟ್ ನ ಅರಣ್ಯ ರಕ್ಷಕ ಅನಿಲ್ ಹಾಗೂ ಡಿಆರ್ಎಫ್ಓ ರಮೇಶ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.

ಮಡಿಕೇರಿ ತಾಲೂಕು ನಿಡುವಟ್ಟು ಗ್ರಾಮದ ಕೆ.ಕೆ. ದುರ್ಯೋದನ ಆ ಗ್ರಾಮದ ಸರ್ವೇ ನಂಬರ್ ೫೦ರಲ್ಲಿ ೩ ಎಕರೆ ೨೦ ಗುಂಟೆ ಭತ್ತದ ಗದ್ದೆ ಹೊಂದಿದ್ದರು. ೨೦೧೮ರಲ್ಲಿ ಈ ಭತ್ತದ ಗದ್ದೆಯ ಮೇಲೆ ಭಾರೀ ಭೂಕುಸಿದು ಭತ್ತದ ಗದ್ದೆ ಮರದ ಬುಡಗಳಿಂದ ಮುಚ್ಚಿಹೋಗಿತ್ತು. ತದನಂತರ ಅರಣ್ಯ ಇಲಾಖೆ ಮರದ ಬುಡಗಳನ್ನು ಅಲ್ಲಿಯೇ ರಾಶಿ ಹಾಕಿದ್ದರು. ಆದರೆ ಭತ್ತದ ಗದ್ದೆಯನ್ನು ಮತ್ತೆ ಕೃಷಿ ಮಾಡಲು ದುರ್ಯೋಧನ ಸ್ಥಳದಲ್ಲಿ ಉಳಿದಿದ್ದ ಮರದ ರಾಶಿಗೆ ಏ.೮ರಂದು ಬೆಂಕಿ ಹಚ್ಚಿದ್ದರು. ಈ ಸಂದರ್ಭ ಭತ್ತದ ಗದ್ದೆಯ ಪಕ್ಕದಲ್ಲೇ ಇದ್ದ ದೇವರ ಬನಕ್ಕೂ ಆಕಸ್ಮಿಕವಾಗಿ ಬೆಂಕಿ ವ್ಯಾಪಿಸಿ ಸುಮಾರು ೨೦ ಸೆಂಟ್ ನಷ್ಟು ಅರಣ್ಯಕ್ಕೆ ಹಾನಿಯಾಗಿತ್ತು.
ಈ ಸಂದರ್ಭ ಸ್ಥಳಕ್ಕೆ ಬಂದ ಅರಣ್ಯ ರಕ್ಷಕ ಅನಿಲ್ ಮತ್ತು ಡಿಆರ್ಎಫ್ಓ ರಮೇಶ ಅವರುಗಳು ಸ್ಥಳ ಮಹಜರು ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಮಾತ್ರವಲ್ಲದೇ, ಅರಣ್ಯ ಸುಟ್ಟ ಜಾಗದಲ್ಲಿ ಗಿಡ ನೆಡಬೇಕು. ಸರಕಾರದಿಂದ ದಂಡ ಹಾಕಿದರೆ ಹೆಚ್ಚಿನ ಹಣ ಕಟ್ಟಬೇಕು. ದೇವರ ಕಾಡು ಸುಟ್ಟಿರುವುದಕ್ಕೆ ಕೇಸ್ ಹಾಕಿದರೆ ಅದನ್ನು ಎದುರಿಸಬೇಕು. ಹೀಗಾಗಿ ಈ ಪ್ರಕರಣವನ್ನು ನಮ್ಮೊಳಗೇ ಮುಗಿಸೋಣವೆಂದು ಹೇಳಿ ದುರ್ಯೋಧನ ಅವರಿಂದ ಅರಣ್ಯ ಸಿಬ್ಬಂದಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಏ.೧೫ರಂದು ಮುಂಗಡವಾಗಿ ೨,೫೦೦ರೂ.ಗಳನ್ನು ಪಡೆದಿದ್ದರು. ಈ ಬಗ್ಗೆ ದುರ್ಯೋಧನ ಏ.೨೨ರಂದು ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಅದರಂತೆ ಇಂದು ನಡೆಸಲಾದ ಟ್ರಾö್ಯಪ್ ಕಾರ್ಯಾಚರಣೆಯಲ್ಲಿ ಪ್ರಮುಖ ಆರೋಪಿ ಅನಿಲ್ ಐಟಿಐ ಜಂಕ್ಷನ್ ಮೂಲಕ ಕಾಂನ್ವೆAಟ್ಗೆ ಹೋಗುವ ಕಾಲು ದಾರಿಯಲ್ಲಿ ೫೫೦೦ರೂ. ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಡಿಆರ್ಎಫ್ಓ ರಮೇಶ ಅವರನ್ನು ಕೂಡ ಬಂಧಿಸಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ.
ಮೈಸೂರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಉಪ ಅಧೀಕ್ಷಕ ಸದಾನಂದ ಎ.ತಿಪ್ಪಣ್ಣವರ್, ವೃತ್ತನಿರೀಕ್ಷಕ ಎನ್.ಪಿ. ಹರೀಶ್ ಮತ್ತು ಪಿ.ಜೆ.ಮಧುಕರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಫೋಟೋ :: ಅನಿಲ್, ರಮೇಶ್




