ಬಿಜೆಪಿ ಅವರಿಂದ ಒಂದು ಆಣೆಕಟ್ಟು ಕಟ್ಟಲು ಸಾಧ್ಯವಾಗಿಲ್ಲ ಕಟ್ಟಿದ್ದರೆ ಹೇಳಲಿ ಅವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸುತ್ತೇನೆ | ಮಡಿಕೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲೆಂಜ್

ಮಡಿಕೇರಿಯಲ್ಲಿ ಆಯೋಜಿಸಲಾಗಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಶಿಸ್ತಿನಿಂದ ಕೂಡಿದ್ದು ಹೆಚ್ಚು ಕಾರ್ಯಕರ್ತರನ್ನು ಸೇರಿಸಿದಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಶಾಸಕರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಧನ್ಯವಾದಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಡಿಕೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತು ಆರಂಭಿಸಿದರು.

ಕಾಂಗ್ರೆಸ್ ಪಕ್ಷ 1985 ರಲ್ಲಿ ಆರಂಭಗೊಂಡಿದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ. 1925 ರಲ್ಲಿ ಆರಂಭಗೊಂಡ ಆರ್. ಎಸ್.ಎಸ್ ಬ್ರಿಟಿಷರನ್ನು ಓಡಿಸಲಿಕ್ಕೆ ಏಕೆ ಪ್ರಯತ್ನಿಸಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರು ಕೊಡುಗೆ ಏನು ಎಂದು ಪ್ರಶ್ನಿಸಿದ ಸಿದ್ದರಾಮಯ್ಯನವರು ಇದುವರೆಗೆ *ಬಿಜೆಪಿಯವರು ಒಂದು ಆಣೆಕಟ್ಟು ಕಟ್ಟಿದ್ದಾರ ಕಟ್ಟಿದ್ದರೆ ಹೇಳಲಿ ನಾನು ಅವರ ವಿರುದ್ಧ ಮಾತನಾಡುವುದನ್ನು ನಿಲ್ಲಿಸುತ್ತೇನೆ ಎಂದರು*. ಹಸಿರು ಕ್ರಾಂತಿಯನ್ನು ತಂದವರು ಲಾಲ್ ಬಹದ್ದೂರ್ ಶಾಸ್ತ್ರಿ ಇಂದಿರಾಗಾಂಧಿ ಹಾಗೂ ಜಗಜೀವ ರಾಮ್. ಆಹಾರ ಉತ್ಪಾದನೆ ಮತ್ತು ಸರಬರಾಜುನ್ನು ತಂದವರು ಕಾಂಗ್ರೆಸ್ ಸರ್ಕಾರ. ಅಂಬೇಡ್ಕರ್ ಸಂವಿಧಾನವನ್ನು ರಚಿಸಿ ಅದನ್ನು ಜಾರಿಗೆ ತಂದವರು ಕಾಂಗ್ರೆಸ್. ಹೀಗೆ ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಾ ಬರುತ್ತಿದೆ. ಇಂದು ಬಿಜೆಪಿ ಜಾತಿ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿದೆ ಎಂದರು. ಇಂದು ಎಲ್ಲರ ದರ ಹೆಚ್ಚಾಗಿದೆ, ಅಚ್ಚೆ ದಿನ್ ಆಯೇಗಾ ಎಂದು ಪ್ರಧಾನಿಗಳು ಹೇಳುತ್ತಲೇ ಬಂದರು. ಆದರೆ ಇದುವರೆಗೂ ಬರಲೇ ಇಲ್ಲ, ಉದ್ಯೋಗ ಸೃಷ್ಟಿಸುತ್ತೇನೆ ಎಂದವರು ಹೇಳಿದ ಹಾಗೆ ನಡೆದುಕೊಂಡಿದ್ದರೆ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು ಆದರೆ ಆಗಿಲ್ಲ. ನಾವು ನುಡಿದಂತೆ ನಡೆದಿದ್ದೇವೆ 2013 ರಿಂದ 2018 ರವರೆಗೆ ನಮ್ಮ ಸರ್ಕಾರ ಇದ್ದಾಗ ನಾವು ಬಿಡುಗಡೆಗೊಳಿಸಿದ ಪ್ರಣಾಳಿಕೆಯಂತೆ ನಡೆದುಕೊಂಡಿದ್ದೇವೆ. ಇದೀಗ ಸರ್ಕಾರ ಬಂದು ಏಳು ತಿಂಗಳಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದರು.. ಕೊಡಗಿನ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರವನ್ನು ಕಾಂಗ್ರೆಸ್ಸಿನ ಮಡಿಲಿಗೆ ಹಾಕಿ ಸರಳ ವ್ಯಕ್ತಿತ್ವದ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಎರಡು ಶಾಸಕರನ್ನು ಗೆಲ್ಲಿಸಿದ್ದಕ್ಕೆ ನಿಮಗೆಲ್ಲರಿಗೂ ಕೃತಜ್ಞತೆ ಹಾಗೂ ಅಭಿನಂದನೆಯನ್ನು ಸಲ್ಲಿಸಲು ನಾನು ಇಂದು ಬಂದಿದ್ದೇನೆ ಎಂದರು.ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಈ ಸಂದರ್ಭ ಕೋರಿದರು.

ಮೂರು ತಾಸು ತಡವಾಗಿ ಆರಂಭಗೊಂಡ ಕಾರ್ಯಕರ್ತರ ಸಭೆಯಲ್ಲಿ ಗೃಹ ಸಚಿವರಾದ ಪರಮೇಶ್ ಸಚಿವರುಗಳಾದ ಎಚ್ ಸಿ ಮಹದೇವಪ್ಪ, ವೆಂಕಟೇಶ್, ಬೈರತಿ ಸುರೇಶ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜಾ ಉತ್ತಪ್ಪ, ಶಾಸಕರಾದ ಎ. ಎಸ್ ಪೊನ್ನಣ್ಣ ಮಂತರ್ ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ ವೀಣಾ ಅಚ್ಚಯ್ಯ, ಚಂದ್ರಮೌಳಿ,, ಟಿ ಪಿ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜಿಲ್ಲೆಯ ವಿವಿಧ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು

Latest Indian news

Popular Stories