ಪೊನ್ನಂಪೇಟೆ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ, ಪೊನ್ನಂಪೇಟೆ ತಾಲೂಕು ಬಂದ್’ಗೆ ಕರೆ | ರೈತ ಸಂಘ ಘೋಷಣೆ

ಬರ ಪರಿಹಾರ ಕುರಿತು ಪೊನ್ನಂಪೇಟೆ ತಾಲೂಕು ರೈತರೊಂದಿಗೆ ರೈತರ ಅವ್ಹಾಲು ಕೇಳುವ ಸಭೆಯು ತಾಲೂಕು ಕಚೇರಿಯಲ್ಲಿ ಇಂದು ತಹಶೀಲ್ದಾರ್ ಎನ್. ಎಸ್ ಪ್ರಶಾಂತ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯನ್ನು ನಡೆಸಿದ್ದಾರೆ. ಪೊನ್ನಂಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಇದುವರೆಗೆ ಘೋಷಣೆ ಮಾಡಿಲ್ಲ, ವರದಿಯಂತೆ ಶೇಕಡ 60ರಷ್ಟು ಮಳೆ ಪ್ರಮಾಣ ಈ ಬಾರಿ ಕಡಿಮೆಯಾಗಿದೆ ಶೇಕಡ 50ರಷ್ಟು ಮಳೆ ಇಲ್ಲದಿದ್ದಾಗ ಅದು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡುತ್ತದೆ ಆದರೆ ಪೊನ್ನಂಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಇದುವರೆಗೆ ಘೋಷಣೆ ಮಾಡಿಲ್ಲ. ಇದರಿಂದ ರೈತರು ತುಂಬಾ ನಷ್ಟ ಅನುಭವಿಸಿದ್ದಾರೆ ಈ ಹಿನ್ನಲೆಯಲ್ಲಿ ಇಂದು ರೈತ ಸಂಘದ ಪದಾಧಿಕಾರಿಗಳು ಅಧಿಕಾರಿಗಳೊಂದಿಗೆ ಸಭೆ ನಡೆಸಿದಾಗ ಸಭೆಯಲ್ಲಿ ಉಪಸ್ಥಿತರಿದ್ದ ತಹಶೀಲ್ದಾರರವರು ಮಾತನಾಡಿ ಸರ್ಕಾರ ನಮ್ಮಿಂದ ವರದಿಯನ್ನು ಪಡೆದಿಲ್ಲ ಕೊಡಗಿನ ಮೂರು ತಾಲೂಕನ್ನು ಮಾತ್ರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ನಾವು ಯಾವುದೇ ವರದಿಯನ್ನು ನೀಡಿಲ್ಲ ಇದೀಗ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ಇದೇ ಸಂದರ್ಭ ಸಭೆಯಲ್ಲಿ ಕಾಫಿ ಬೋರ್ಡಿನ ಡೆಫ್ಟಿ ಡೈರೆಕ್ಟರ್ ಶ್ರೀದೇವಿ ಉಪಸ್ಥಿತರಿದ್ದು ಮಳೆಯ ಕೊರತೆ ಪ್ರಮಾಣ ಅಂಕಿ ಅಂಶಗಳನ್ನು ಸಭೆಯ ಮುಂದಿಟ್ಟರು, ಕೃಷಿ ಇಲಾಖೆಯ ಎ. ಡಿ ಎಲ್ ಆರ್ ಶಿವಮೂರ್ತಿ, ಕೃಷಿ ಅಧಿಕಾರಿಗಳಾದ ಶ್ರೀಮತಿ ರೀನ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿ ಶ್ರೀಮತಿ ದೀನಾ, ಪೊನ್ನಂಪೇಟೆ ಕಂದಾಯ ಅಧಿಕಾರಿಗಳಾದ ಸುಧೀಂದ್ರ ಮುಂತಾದವರು ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನುಸೋಮಯ್ಯ, ಪೊನ್ನಂಪೇಟೆ ತಾಲೂಕಿನಲ್ಲಿ ಮಳೆ ಇಲ್ಲದೆ ಗದ್ದೆಗಳೆಲ್ಲವೂ ಒಣಗುತ್ತಿದೆ ಭತ್ತ ನಾಟಿ ಮಾಡಿ ಸಂಪೂರ್ಣ ಒಣಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ, ಕಾಫಿ ತೋಟದಲ್ಲಿ ಕೂಡ ಕಾಫಿ, ಒಳ್ಳೆ ಮೆಣಸು ಸಂಪೂರ್ಣ ನಾಶವಾಗುವ ಹಂತದಲ್ಲಿದೆ ನೀರಿಗೆ ತೊಂದರೆಯಾಗೋ ಎಲ್ಲ ಲಕ್ಷಣಗಳು ಕಂಡುಬರುತ್ತವೆ ಇಷ್ಟೆಲ್ಲ ಆದರೂ ಕೂಡ ಕೃಷಿ ಇಲಾಖೆ ಯಾವುದೇ ಮಾಹಿತಿಗಳನ್ನು ಸರ್ಕಾರಕ್ಕೆ ನೀಡಿಲ್ಲ. ರೈತರೆಲ್ಲ ಕಂಗಲಾಗಿದ್ದಾರೆ ಹತ್ತು ದಿನದೊಳಗೆ ಬರಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ನೀಡದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆ ಹಾಗೂ ಪೊನ್ನಂಪೇಟೆ ತಾಲೂಕು ಬಂದ್ ನಡೆಸುವುದಾಗಿ ಈ ಸಂದರ್ಭ ಎಚ್ಚರಿಸಿದ್ದಾರೆ. ಸಭೆಯಲ್ಲಿ , ಸುಜಯ್, ಅಜ್ಜಮಾಡ ಚಂಗಪ್ಪ ಜಿಲ್ಲಾ ಸಂಚಾಲಕರಾದ ಪುಚ್ಚಿಮಾಡ ಸುಭಾಷ್, ಎಂ.ಪ್ರವೀಣ್, ಎ.ಮಂಜು,, ಭವಿಕುಮಾರ್,ರೈತ ಸಂಘದ ಹೋಬಳ್ಳಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories