ಮಡಿಕೇರಿ KSRTC ಡಿಪೋ ವ್ಯವಸ್ಥಾಪಕಿ ಗೀತಾ ವರ್ಗಾವಣೆ

ಮಡಿಕೇರಿಯ ಕೆ ಎಸ್ ಆರ್ ಟಿ ಸಿ ಡಿಪೋ ವ್ಯವಸ್ಥಾಪಕರಾಗಿದ್ದ ಶ್ರೀಮತಿ ಗೀತಾ ರವರನ್ನು ಇಂದು ಮಧ್ಯಾಹ್ನ ಬಿಡುಗಡೆಗೊಳಿಸಿ ಹಾಸನ ವಿಭಾಗದ ರಾಮನಾಥಪುರ ಘಟಕಕ್ಕೆ ವರ್ಗಾಯಿಸಲಾಗಿದೆ.

ಮಡಿಕೇರಿ ಘಟಕದಿಂದ ಇವರನ್ನು ಬಿಡುಗಡೆಗೊಳಿಸಿ ಕಳುಹಿಸಲಾಗಿದೆ. ಸಹಾಯಕ ಕಾರ್ಯ ಪಾಲಕ ಅಭ್ಯಂತರರಾದ ಮೊಹಮ್ಮದ್ ಆಲಿ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ. ಮೊಹಮ್ಮದ್ ಅಲಿ ನೂತನ ಪ್ರಭಾರ ಘಟಕ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ಮಡಿಕೇರಿ ಘಟಕದಲ್ಲಿ ಇದ್ದ ಶ್ರೀಮತಿ ಗೀತಾ ರವರ ಮೇಲೆ ಬಹಳಷ್ಟು ಆರೋಪಗಳಿದ್ದರೂ ಕೂಡ ಈ ಹಿಂದೆ ಕೆಲವು ಪ್ರಭಾವಿ ರಾಜಕಾರಣಿಗಳ ಮತ್ತು ಜನಪ್ರತಿನಿಧಿಗಳ ಕೃಪೆಯಿಂದ ಗಟ್ಟಿಯಾಗಿ ಜಿಲ್ಲೆಯಲ್ಲಿ ನೆಲೆ ನಿಂತಿದ್ದರೂ. ಹೊಸ ಸರ್ಕಾರ ಬಂದ ನಂತರ ಇವರನ್ನು ಬೇರೆಡೆಗೆ ವರ್ಗಾಯಿಸಿದ್ದರು. ಆದರೂ ಕೂಡ ಇವರು ಇಲ್ಲಿಂದ ಬಿಡುಗಡೆಗೊಳ್ಳದೆ ಮತ್ತೆ ಪುನಃ ಹಿಂದಿನಂತೆ ಪ್ರಭಾವ ಬೀರಿ ಇಲ್ಲೇ ಮುಂದುವರಿಯಲು ಶತ ಪ್ರಯತ್ನ ನಡೆಸಿದ್ದರು, ಆದರೆ ನಿನ್ನೆ ನಡೆದಘಟಕದ ಕಿರಿಯ ಸಹಾಯಕನ ಆತ್ಮಹತ್ಯೆ ಯತ್ನಾದ ಘಟನೆಯಿಂದ ಎಚ್ಚೆತ್ತ ಆಡಳಿತ ಇಂದು ಅವರನ್ನು ಬಿಡುಗಡೆಗೊಳಿಸಿದ್ದಾರೆ.

Latest Indian news

Popular Stories