ಮಡಿಕೇರಿ : ಮುಕ್ತ ಕಥಾ ಸ್ಪರ್ಧೆ ಆಯೋಜನೆ

ಮಡಿಕೇರಿ. ಫೆ 2. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಿ. ಬಿ.ಎಸ್ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ದತ್ತಿ ಕಾರ್ಯಕ್ರಮದಂತೆ ಕೊಡಗು ಜಿಲ್ಲಾ ಮಟ್ಟದ ಮುಕ್ತ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ.

ಜಿಲ್ಲೆಯ ಹಿರಿಯ ಸಾಹಿತಿಗಳು ಪತ್ರಕರ್ತರು ಶಕ್ತಿ ದಿನ ಪತ್ರಿಕೆಯ ಸಂಸ್ಥಾಪಕರು ಆಗಿದ್ದ ಬಿ.ಎಸ್ ಗೋಪಾಲಕೃಷ್ಣ ಅವರ ನೆನಪಿನಲ್ಲಿ ಅವರ ಪುತ್ರ ಬಿ.ಜಿ ಅನಂತಶಯನ ಈ ದತ್ತಿ ಸ್ಥಾಪಿಸಿದ್ದು ಕೊಡಗು ಜಿಲ್ಲೆಯ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈ ಕಥಾಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ.

ಕಥೆಯನ್ನು ಎ4 ಅಳತೆಯ ಹಾಳೆಯಲ್ಲಿ 2 ಪುಟ ಮೀರದಂತೆ ರಚಿಸತಕ್ಕದ್ದು.ತೀರ್ಪುಗಾರರ ಮೂಲಕ ಪ್ರಥಮ ದ್ವಿತೀಯ ಮತ್ತು ತೃತೀಯ ಬರಹಗಳನ್ನು ಆರಿಸಿ ಬಹುಮಾನ ನೀಡಲಾಗುವುದು
ಕಥೆ ಬರೆದು ಸಲ್ಲಿಸಲು ದಿನಾಂಕ. 15.02.2024 ಕೊನೆಯ ದಿನವಾಗಿದ್ದು ಕಳುಹಿಸಬೇಕಾದ ವಿಳಾಸ :
ಅಧ್ಯಕ್ಷರು,
ಕನ್ನಡ ಸಾಹಿತ್ಯ ಪರಿಷತ್
ಬಾಳೆಲೆ ಹೋಬಳಿ ಘಟಕ,
ಅಂಚೆ ಪೆಟ್ಟಿಗೆ ಸಂಖ್ಯೆ 63,
ಬಾಳೆಲೆ, ಪೊನ್ನಂಪೇಟೆ ತಾಲೂಕು,
ಕೊಡಗು ಜಿಲ್ಲೆ 571219

ಸಂಪರ್ಕಿಸಲು ದೂರವಾಣಿ ಸಂಖ್ಯೆ:
ಪಡಿಞರಂಡ ಪ್ರಭು ಕುಮಾರ್,
ಅಧ್ಯಕ್ಷರು,
9449763809
ಮುಕ್ಕಾಟಿರ ಜಾನಕಿ ಕಾವೇರಪ್ಪ,
ಗೌರವ ಕಾರ್ಯದರ್ಶಿ
9739294538
ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.

Latest Indian news

Popular Stories