ಕೊಡವ ಅಭಿವೃದ್ಧಿ ನಿಗಮಬೊಮ್ಮಾಯಿ ಬೋಗಸ್ ಆದೇಶ ತೆನ್ನಿರ ಮೈನಾ ಟೀಕೆ

ಸಂಸದ ಪ್ರತಾಪ್ ಸಿಂಹ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಟೀಕಿಸಿದ್ದಾರೆ.

ಇಂದು ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೊನ್ನೆ ವಿರಾಜಪೇಟೆಯಲ್ಲಿ ನಡೆದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಯವರು ಬಜೆಟ್ ನಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ 10 ಕೋಟಿ ಹಣ ನೀಡಿದ್ದಾರೆ ಎಂದು ಹೇಳುವ ಮೂಲಕ ಜನರಿಗೆ ಸುಳ್ಳು ಹೇಳಿದ್ದಾರೆ.
ಬಸವರಾಜ್ ಬೊಮ್ಮಾಯಿಯವರು ಫೆಬ್ರುವರಿ 17 ರಂದು ಬಜೆಟ್ ಮಂಡನೆ ಮಾಡಿದ್ದರು.ಅದರಲ್ಲಿ ಕೊಡವ ಅಭಿವೃದ್ಧಿ ನಿಗಮದ ಸ್ಥಾಪನೆ ಇರಲಿಲ್ಲ.
ಬದಲಾಗಿ ಮಾರ್ಚ್ 20 ರಂದು ಚುನಾವಣೆ ಘೋಷಣೆಗೆ ಕ್ಷಣ ಗಣನೆ ಆರಂಭವಾದ ಸಂಧರ್ಭದಲ್ಲಿ ಕೇವಲ ಆದೇಶ ಹೊರಡಿಸಿದ್ದರು.ಇದು ಕೇವಲ ಚುನಾವಣೆ ಗಿಮಿಕ್ ಆಗಿತ್ತು.ಆದರೆ ಅದರ ಅರಿವು ಇದ್ದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ರವರು ತಮ್ಮ ಚುನಾವಣೆ ಪ್ರಚಾರದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲೇ ಇಲ್ಲ.ಹಾಗಾಗಿ ಇದು ಬೊಮ್ಮಾಯಿಯವರ ಬೋಗಸ್ ಆದೇಶ ಎಂದು ಮೈನಾ ಕಿಡಿ ಕಾರಿದರು.

ಯಾವುದೇ ಅಭಿವೃದ್ಧಿ ನಿಗಮ ಘೋಷಣೆಯಾಗುವಾಗ ಕಂಪೆನಿ ಕಾಯ್ದೆ 2013 ಸೆಕ್ಷನ್ 7 ರ ಅನ್ವಯ ನೊಂದಾಯಿಸಿ ಆರ್ಥಿಕ ಇಲಾಖೆಯ ಒಪ್ಪಿಗೆ,ಅನುದಾನದ ಬಿಡುಗಡೆ,ಲೆಕ್ಕಶೀರ್ಷಿಕೆ,ವ್ಯವಸ್ಥಾಪಕ ನಿರ್ದೇಶಕರು,ಕಛೇರಿ ಸಿಬ್ಬಂದಿ,ಮುಂತಾದವುಗಳನ್ನು ಉಲ್ಲೇಖಿಸಿ ಆದೇಶಿಸಲಾಗುತ್ತದೆ.

ಆದರೆ ಕೊಡವ ಅಭಿವೃದ್ಧಿ ನಿಗಮ ಕೇವಲ ಆದೇಶದ ಪ್ರತಿ ಮಾತ್ರ ಇದ್ದು ಇದು ಜನರಿಗೆ ಮಾಡಿದ ವಂಚನೆ ಪ್ರಕರಣವಾಗಿದೆ.
13-11-2020 ರಲ್ಲಿ 50 ಕೋಟಿ ಅನುದಾನದೊಂದಿಗೆ ಸ್ಥಾಪಿತವಾದ ಮರಾಠ ಅಭಿವೃದ್ಧಿ ಪ್ರಾಧಿಕಾರ,23-11-2020 ರಲ್ಲಿ 500 ಕೋಟಿ ಅನುದಾನದೊಂದಿಗೆ ಸ್ಥಾಪಿತವಾದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ,17-7-2021 ರಲ್ಲಿ 500 ಕೋಟಿ ಅನುದಾನದೊಂದಿಗೆ ಸ್ಥಾಪಿತವಾದ ಒಕ್ಕಲಿಗರ ನಿಗಮದ ಆದೇಶದ ಪ್ರತಿಗಳನ್ನು ಪ್ರದರ್ಶನ ಮಾಡಿದ ತೆನ್ನಿರ ಮೈನಾ ರವರು 20-3-2023 ರಲ್ಲಿ ಬೊಮ್ಮಾಯಿ ಸರ್ಕಾರ ಹೊರಡಿಸಿದ ಕೊಡವ ಅಭಿವೃದ್ಧಿ ನಿಗಮದ ಆದೇಶವನ್ನು ತುಲನೆ ಮಾಡಲಿ ಎಂದು ಸಂಸದರಿಗೆ ಸವಾಲು ಹಾಕಿದರು.

2023 ರ ಮೇ 13 ರ ನಂತರ ಕೊಡಗಿನ ಸಾಮಾಜಿಕ ಚಟುವಟಿಕೆಗಳು ಬದಲಾಗಿದ್ದು ಹಿಂದೆ ನಡೆಯುತ್ತಿದ್ದ ಜಾತಿ ಆಧಾರಿತ ,ಮತೀಯ ಆಧಾರಿತ ಸಂಘರ್ಷಗಳು ಮಾಯವಾಗಿ ಅಭಿವೃದ್ಧಿ ಪರ ಚರ್ಚೆಗಳನ್ನು ಕಾಣುತ್ತಿದ್ದೇವೆ.ಇದಕ್ಕೆ ಕಾರಣ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಮತ್ತು ಡಾ ಮಂತರ್ ಗೌಡ ರವರ ಪಾರದರ್ಶಕ ಆಡಳಿತ ವಾಗಿದೆ.ಇಂತಹ ವಾತಾವರಣವನ್ನು ಕಲುಷಿತಗೊಳಿಸಲು ಬರುತ್ತಿರುವ ಪ್ರತಾಪ್ ಸಿಂಹ ರವರನ್ನು ಕೊಡಗಿನ ಜನತೆ ಮುಂಬರುವ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಲಿದ್ದಾರೆ ಎಂದು ತೆನ್ನಿರ ಮೈನಾ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ ನವರು ಮಾತನಾಡಿ ಸಮುದಾಯದ ಕಾರ್ಯಕ್ರಮದಲ್ಲಿ ಸಮುದಾಯದ ಏಳ್ಗೆ ಯ ಬಗ್ಗೆ ಮಾತನಾಡದೆ ರಾಜಕೀಯ ಬಾಷಣ ಮಾಡಿ ಕಾರ್ಯಕ್ರಮವನ್ನು ಅಸಭ್ಯಗೊಳಿಸಿದ ಸಂಸದ ಪ್ರತಾಪ್ ಸಿಂಹ ನಡೆಯನ್ನು ಖಂಡಿಸಿದರು.
ಸೇವಾದಳದ ಜಿಲ್ಲಾಧ್ಯಕ್ಷರಾದ ಕಾನೆ ಹಿತ್ಲು ಮೊಣ್ಣಪ್ಪ,ಸೈನಿಕ ಘಟಕದ ಅಧ್ಯಕ್ಷರಾದ ಬೊಳ್ಳಿಯಂಡ ಗಣೇಶ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೀನಾಜ್ ಪ್ರವೀಣ್,ಒಬಿಸಿ ಘಟಕದ ಬ್ಲಾಕ್ ಅಧ್ಯಕ್ಷರಾದ ಜಿ.ಸಿ.ಜಗದೀಶ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories