ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ವಿಶೇಷ ಗೌರವ
ಪೊನ್ನಂಪೇಟೆ, ಸೆ.27: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಈ ಸಾಲಿನ ಕೆ.ಎಂ.ಎ. ಪ್ರತಿಭಾ ಪುರಸ್ಕಾರವನ್ನು ಒಟ್ಟು 21 ವಿದ್ಯಾರ್ಥಿಗಳು ಪಡೆದುಕೊಂಡರು. ವಿರಾಜಪೇಟೆಯ ಸೇಂಟ್ ಆನ್ಸ್ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2023 ವಿತರಣಾ ಸಮಾರಂಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಸಂಶನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಮುಂಬೈನ ಎನ್.ಸಿ.ಟಿ. ಗ್ರೂಪ್ ಮಾಲೀಕರಾದ ಅಕ್ಕಳತಂಡ ಎಸ್. ಮೊಯ್ದು ಅವರ ಪ್ರಾಯೋಜಕತ್ವದಲ್ಲಿ ದಿ.ಅಕ್ಕಳತಂಡ ಎಸ್. ಹಂಸ ಅವರ ಸ್ಮರಣಾರ್ಥವಾಗಿ ಆಕರ್ಷಕ ನಗದು ಬಹುಮಾನವನ್ನು ಒಳಗೊಂಡ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ-2023 ಅನ್ನು ಈ ಸಮಾರಂಭದಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್. ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿರಾಜಪೇಟೆಯ ಸೇಂಟ್ ಆನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಟಿ.ವಿ. ವೈಷ್ಣವಿ ಮತ್ತು ಮಡಿಕೇರಿಯ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೋಲೆನ್ಸಿಯಾ ಬಿಯಾನ್ ರಾಯ್ ಅವರಿಗೆ ಕ್ರಮವಾಗಿ ನೀಡಿ ಗೌರವಿಸಲಾಯಿತು.
ಕೆ.ಎಂ.ಎ. ಪ್ರತಿಭಾ ಪುರಸ್ಕಾರ- 2023ರ ಮದರಸ 5ನೇ ತರಗತಿ ವಿಭಾಗದಲ್ಲಿ ಮಂಡೇಂಡ ಎಂ. ಮುಜ್ತಬ (ಮಕ್ದುಮಿಯಾ ಸುನ್ನಿ ಮದರಸ, ವಿರಾಜಪೇಟೆ), ಮೀತಲತಂಡ ಯು. ಮುಫೀದಾ(ಹಿದಾಯತ್ತುಲ್ ಇಸ್ಲಾಂ ಮದರಸ, ಗುಂಡಿಕೆರೆ) 7ನೇ ತರಗತಿ ವಿಭಾಗದಲ್ಲಿ c ಚೆಂಬಾರಂಡ ಎಂ. ಫಾತಿಮತ್ ತಸ್ನಿಮ( ನುಶ್ರತುಲ್ ಇಸ್ಲಾಂ ಸೆಕೆಂಡರಿ ಮದರಸ ಎಮ್ಮೆಮಾಡು) ಮತ್ತು 10ನೇ ತರಗತಿ ವಿಭಾಗದಲ್ಲಿ ಆಲೀರ ಎಸ್. ಮೊಹಮ್ಮದ್ ಸಾಹಿಲ್ (ಮುನವಿರುಲ್ ಇಸ್ಲಾಂ ಮದರಸ ಮಾಪಿಳೆತೋಡು), ದುದ್ದಿಯಂಡ ಎ. ಸೈಬುನ್ನೀಸಾ (ಬುಸ್ತಾನುಲ್ ಉಲುಂ ಮದರಸ, ನಲ್ವತ್ತೋಕ್ಲು) ಪುರಸ್ಕಾರ ಪಡೆದರು.
ಎಸ್.ಎಸ್. ಎಲ್. ಸಿ. ವಿಭಾಗದಲ್ಲಿ ಕುಂಡಂಡ ಹೆಚ್. ಮೊಹಮ್ಮದ್ ಸಮ್ಮಾಸ್ (ವಿನಾಯಕ ಇಂಗ್ಲೀಷ್ ಪ್ರೌಢಶಾಲೆ ವಿರಾಜಪೇಟೆ ), ಆಲೀರ ಯು. ಸಾನಿಯಾ,(ಕರ್ನಾಟಕ ಪಬ್ಲಿಕ್ ಶಾಲೆ, ಪೊನ್ನಂಪೇಟೆ) ಅಕ್ಕಳತಂಡ ಎಂ. ಫಿದಾ ಸಾನಿಯಾ (ಆರ್ಚಿಡ್ಸ್ ಇಂಟರ್ನ್ಯಾಷನಲ್ ಶಾಲೆ, ಮುಂಬೈ) ಮತ್ತು ಕುರಿಕಡೆ ಎ. ಮುನೀರ (ಪಾರಣೆ ಪ್ರೌಢಶಾಲೆ,ಪಾರಾಣೆ) ಅವರು ಕೆ.ಎಂ.ಎ. ಪ್ರತಿಭಾ ಪುರಸ್ಕಾರವನ್ನು ಕ್ರಮವಾಗಿ ಪಡೆದುಕೊಂಡರು.
ದ್ವಿತೀಯ ಪಿ.ಯು.ಸಿ. ವಿಭಾಗದಲ್ಲಿ ಕತ್ತಣಿರ ಐ. ಆಶಿಕ (ಸಂತ ಮೈಕಲರ ಪದವಿ ಪೂರ್ವ ಕಾಲೇಜು,ಮಡಿಕೇರಿ), ಕೂವಲೆರ ಎ. ಸುಹೈಮಾ(ಎಸ್. ಎಂ.ಎಸ್. ಪದವಿ ಪೂರ್ವ ಕಾಲೇಜು, ಅರಮೇರಿ) ಮೀತಲತಂಡ ಐ. ಅಜ್ಮೀಯ(ಎಸ್ಇಎ ಮಹಿಳೆಯರ ಪದವಿ ಪೂರ್ವ ಕಾಲೇಜು, ಪೆರುಂಬಾಡಿ), ಆಲೀರ ಎ. ಆಯಿಷತುಲ್ ಸಾನಿಯಾ (ಸಂತ ಮೈಕಲರ ಪದವಿ ಪೂರ್ವ ಕಾಲೇಜು,ಮಡಿಕೇರಿ), ಚೇನೋತಂಡ ಎಸ್. ನಾಝಿಯಾ (ಸಂತ ನಮ್ಮ ಪದವಿ ಪೂರ್ವ ಕಾಲೇಜು, ವಿರಾಜಪೇಟೆ) ಕನ್ನಡಿಯಂಡ ಎಂ. ಸುರಯ್ಯ (ಸರ್ಕಾರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ), ದುದ್ದಿಯಂಡ ಎ. ಸೈಬುನ್ನೀಸ (ಸರ್ಕಾರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ), ಪುದಿಯಾಣೆರ ಎಂ. ಮೊಹಿದೀನ್ (ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು, ವಿರಾಜಪೇಟೆ) ಅವರಿಗೆ ಕ್ರಮವಾಗಿ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಅಲ್ಲದೆ ನಲ್ವತ್ತೋಕ್ಲಿನ ವಿದ್ಯಾರ್ಥಿನಿ ಕನ್ನಡಿಯಂಡ ಎಂ. ಸುಹೈಲ ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಂಸ್ಥೆಯ ಆರ್ಥಿಕ ಧನ ಸಹಾಯದ ಚೆಕ್ಕನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕೃತರ ಪರವಾಗಿ ರೊಲೆನ್ಸಿಯಾ ಬಿಯಾನ್ ರಾಯ್, ಟಿ.ವಿ. ವೈಷ್ಣವಿ, ಕತ್ತಣಿರ ಐ. ಆಶಿಕ ಮತ್ತು ಕುಂಡಂಡ ಹೆಚ್. ಮೊಹಮ್ಮದ್ ಸಮ್ಮಾಸ್ ಮಾತನಾಡಿ ತಮ್ಮ ಶೈಕ್ಷಣಿಕ ಸಾಧನೆಯ ಅನುಭವ ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಮಾತನಾಡಿ, ಈ ಸಾಲಿನಲ್ಲಿ ಕೆ.ಎಂ.ಎ. ಪ್ರತಿಭಾ ಪುರಸ್ಕಾರಕ್ಕಾಗಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿತ್ತು. ಇದನ್ನು ಪರಿಶೀಲಿಸಿದ ಕೆ.ಎಂ.ಎ. ಕಾರ್ಯಕಾರಿ ಸಮಿತಿಯು ಮೆರಿಟ್ ಆಧಾರದಲ್ಲಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಿದೆ ಎಂದು ತಿಳಿಸಿದರಲ್ಲದೆ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸಲು ಕೆ. ಎಂ. ಎ. ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ತಂಬಂಡ ವಿಜಯ್ ಪೂಣಚ್ಚ, ಕೆಎಂಎ ಸ್ಥಾಪಕಾಧ್ಯಕ್ಷರಾದ ಕುವೆಂಡ ವೈ.ಹಂಝತುಲ್ಲಾ, ಮೂರ್ನಾಡಿನ ಹಿರಿಯ ವೈದ್ಯರಾದ ಡಾ. ಜೋಯಿಪೆರ ಎ. ಕುಂಞಬ್ದುಲ್ಲಾ, ಎನ್.ಸಿ.ಟಿ. ಗ್ರೂಪ್ ಮಾಲೀಕರಾದ ಅಕ್ಕಳತಂಡ ಎಸ್. ಮೊಯ್ದು, ದುಬೈನ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಪ್ರಮುಖರಾದ ಹರಿಶ್ಚಂದ್ರ ಎ. ಅಬೂಬಕ್ಕರ್ ಹಾಜಿ, ಗೋಣಿಕೊಪ್ಪಲಿನ ಉದ್ಯಮಿ ಚಿಮ್ಮಿಚಿರ ಕೆ. ಇಬ್ರಾಹಿಂ ಮೊದಲಾದವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕೆ.ಎಂ.ಎ. ಮಾಜಿ ಅಧ್ಯಕ್ಷರಾದ ದುದ್ದಿಯಂಡ ಎಸ್. ಆಲಿ, ಮೀತಲತಂಡ ಅಬ್ಬಾಸ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಕಿಕ್ಕರೆ ಉಮ್ಮರ್ ಮಾಸ್ಟರ್ ಸೇರಿದಂತೆ ವಿವಿಧ ಜಮಾಅತ್ ಗಳ ಅಧ್ಯಕ್ಷರು, ವಿವಿಧ ರಾಜಕೀಯ ಪಕ್ಷದ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಕೆ.ಎಂ.ಎ. ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.