ಎರೆಡೆರಡು ಬಾರಿ ಜಿಎಸ್‌ಟಿ ಕಡಿತ : ಕೊಡಗು ಗುತ್ತಿಗೆದಾರರ ಸಂಘ ಆಕ್ಷೇಪ

ಮಡಿಕೇರಿ ಏ.೧ : ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭ ಮಾತ್ರವಲ್ಲದೆ ಪೂರ್ಣಗೊಂಡ ಕಾಮಗಾರಿಗೆ.

ಬಿಲ್ ಪಾವತಿಸುವಾಗಲೂ ಗುತ್ತಿಗೆದಾರರಿಗೆ ಜಿಎಸ್‌ಟಿ ಮತ್ತಿತರ ತೆರಿಗೆಗಳನ್ನು ವಿಧಿಸಲಾಗುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ, ತಕ್ಷಣ ಈ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸಿದೆ.

ನಗರದಲ್ಲಿ ಸಭೆ ನಡೆಸಿದ ಸಂಘದ ಪದಾಧಿಕಾರಿಗಳು ಎರೆಡೆರಡು ಬಾರಿ ಜಿಎಸ್‌ಟಿ ಮತ್ತಿತರ ತೆರಿಗೆಗಳನ್ನು ವಿಧಿಸುವುದನ್ನು ವಿರೋಧಿಸುವುದಾಗಿ ತಿಳಿಸಿದರು.

ದುಬಾರಿ ವೆಚ್ಚದ ನಡುವೆ ಗುತ್ತಿಗೆದಾರರ ಮೇಲೆ ತೆರಿಗೆ ಹೊರೆ ಹೊರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಬಾರಿ ಮಾತ್ರ ಜಿಎಸ್‌ಟಿ ಮತ್ತಿತರ ತೆರಿಗೆಗಳನ್ನು ವಿಧಿಸಬೇಕು ಹಾಗೂ ಈ ಬಗ್ಗೆ ತೆರಿಗೆ ಇಲಾಖೆಗೆ ಮನವರಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಸಂಘದ ಪ್ರಮುಖರು ಮನವಿ ಪತ್ರ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಕೆ.ಎ.ರವಿಚಂಗಪ್ಪ ಅವರು ಪ್ರತಿಕ್ರಿಯೆ ನೀಡಿ ಎರೆಡೆರಡು ಬಾರಿ ತೆರಿಗೆ ವಸೂಲಿ ಮಾಡುವುದರಿಂದ ಗುತ್ತಿಗೆದಾರರಿಗೆ ಹೊರೆಯಾಗಲಿದೆ. ಆದ್ದರಿಂದ ಸಂಬAಧಪಟ್ಟ ಇಲಾಖೆಗಳು ತಕ್ಷಣ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಿ ಒಂದು ಬಾರಿ ಮಾತ್ರ ತೆರಿಗೆ ಕಡಿತಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಫೋಟೋ :: ರವಿಚಂಗಪ್ಪ

Latest Indian news

Popular Stories