ನೀಲಾಕಾಶದಲ್ಲಿ ವರ್ಣರಂಜಿತ ಬಾನಾಡಿಗಳು: ತಣ್ಣೀರು ಬಾವಿ ಬೀಚ್‌ನಲ್ಲಿ‌ ಗಾಳಿಪಟ ಉತ್ಸವ

ಮಂಗಳೂರು: ಮಂಗಳೂರಿನ‌ ತಣ್ಣೀರುಬಾವಿ ಬೀಚ್‌ನಲ್ಲಿ ಟೀಂ‌ ಮಂಗಳೂರು ಸಂಸ್ಥೆ ಆಯೋಜಿಸಿದ್ದ ಗಾಳಿಪಟ ಉತ್ಸವ ಪ್ರವಾಸಿಗರ ಕಣ್ಮನ ಸೆಳೆಯಿತು.

IMG 20240211 WA0008 Manglore

ಟೀಂ ಮಂಗಳೂರು ಸಂಸ್ಥೆ‌ ನಿರಂತರವಾಗಿ ಗಾಳಿಪಟ ಉತ್ಸವ ನಡೆಸುತ್ತಾ ಬರುತ್ತಿದ್ದು, ಇದು ಏಳನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವಾಗಿದೆ.

IMG 20240211 WA0009 Manglore

ಕಥಕ್ಕಳಿ, ಗರುಡ, ಗಣಪ, ಪೊಲೀಸ್, ಹುಲಿ, ಹಲ್ಲಿ, ಬೆಕ್ಕು, ಕರಡಿ, ಏರೋಪ್ಲೇನ್, ಟ್ರೈನ್ ಗಾಳಿಪಟ ಹೀಗೆ ವೈವಿಧ್ಯಮಯ ಗಾಳಿಪಟಗಳು ಉತ್ಸವದಲ್ಲಿ ಭಾಗವಹಿಸಿದ್ದವು. ಸಣ್ಣಪುಟ್ಟ ಗಾಳಿಪಟಗಳಿಂದ ಹಿಡಿದು ಬೃಹತ್ ಗಾತ್ರದ ಗಾಳಿಪಟಗಳು ಗಾಳಿಯ ಬೀಸುವಿಕೆಗೆ ತಕ್ಕಂತೆ ಓಲಾಡಿ, ಹಾರಾಡಿ, ಕುಲುಕಾಡಿ ನೆರೆದಿದ್ದವರ ಕಣ್ಮನ ಸೆಳೆಯುತ್ತಿತ್ತು.ಶನಿವಾರ ಪ್ರಾರಂಭಗೊಂಡ ಎರಡು ದಿನಗಳ ಉತ್ಸವ ಆದಿತ್ಯವಾರವೂ ಮುಂದುವರಿಯಿತು.

Latest Indian news

Popular Stories