ಮೂಡಬಿದ್ರಿ : ಉದ್ಯೋಗ ಮೇಳದಲ್ಲಿ ಗಲ್ಫ್ ದೇಶದ ಕಂಪನಿಗಳು ಸೇರಿದಂತೆ ಒಟ್ಟು 192 ಕಂಪನಿಗಳು ಭಾಗಿ

ಮಂಗಳೂರು: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಅ.6 ಮತ್ತು 7ರಂದು ಹಮ್ಮಿಕೊಂಡಿರುವ ‘ಆಳ್ವಾಸ್ ಪ್ರಗತಿ-2023’ ಉದ್ಯೋಗ ಮೇಳದಲ್ಲಿ ಗಲ್ಫ್ ದೇಶದ ಕಂಪನಿಗಳು ಸೇರಿದಂತೆ ಒಟ್ಟು 192 ಕಂಪನಿಗಳು ಭಾಗವಹಿಸಲಿದೆ.13,605 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ನಡೆಯುವ ಮೇಳದಲ್ಲಿ ಗಲ್ಫ್‌ನ ಎಕ್ಸ್‌ಪರ್ಟೈಸ್ ಮತ್ತು ಬುರ್ಜಿಲ್ ಹೋಲ್ಡಿಂಗ್ಸ್, ದುಬೈನ ಭವಾನಿ ಗ್ರೂಪ್‌ ಕಂಪನಿಗಳು ಉತ್ತಮ ಪ್ಯಾಕೇಜ್‌ನೊಂದಿಗೆ ಪದವೀಧರರನ್ನು ನೇಮಕ ಮಾಡಿಕೊಳ್ಳಲಿವೆ.

ಫ್ಯಾಕ್ಟ್‌ಸೆಟ್‌ ಸಿಸ್ಟಮ್ ಇಂಡಿಯಾ ಕಂಪನಿಯು ಎಂಬಿಎ, ಎಂ.ಕಾಂ, ಬಿ.ಕಾಂ, ಬಿಬಿಎ ಪದವೀಧರರಿಗೆ ಹೈದರಾಬಾದ್‌ನಲ್ಲಿ ವಾರ್ಷಿಕ ₹7.1 ಲಕ್ಷ ಪ್ಯಾಕೇಜ್‌ನ ಉದ್ಯೋಗ ನೀಡಲಿದೆ’ಸುಮಾರು 25 ಕಂಪನಿಗಳು 250ಕ್ಕೂ ಹೆಚ್ಚು ಉದ್ಯೋಗಗಳನ್ನು ಮೆಕ್ಯಾನಿಕಲ್ ಪದವೀಧರರಿಗೆ ನೀಡಲಿದ್ದು, 15 ಕಂಪನಿಗಳು 52 ಹುದ್ದೆಗಳನ್ನು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವೀಧರರಿಗೆ ನೀಡಲಿವೆ.

ಏಸ್‌ ಡಿಸೈನರ್ಸ್, ಏಸ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್ಸ್, ಅಜಾಕ್ಸ್ ಎಂಜಿನಿಯರಿಂಗ್, ಟೊಯೊಟೊ ಇಂಡಸ್ಟ್ರೀಸ್ ಎಂಜಿನ್‌ ಇಂಡಿಯಾ, ಬುಲ್ಲರ್ ಇಂಡಿಯಾ, ಸ್ವಿಚ್‌ಗೇರ್ ಮತ್ತಿತರ ಕಂಪನಿಗಳು ಪಾಲ್ಗೊಳ್ಳುತ್ತಿದ್ದು, 1,700ರಷ್ಟು ಹುದ್ದೆ ಭರ್ತಿ ಮಾಡಿಕೊಳ್ಳಲಿವೆ.

Latest Indian news

Popular Stories