ಮಂಗಳೂರು: SIO ಬೆಂಗರೆ ಘಟಕದ ವತಿಯಿಂದ ಮಂಗಳೂರು ದಕ್ಷಿಣ ಶಾಸಕರಾದ ಡಿ ವೇದವ್ಯಾಸ್ ಕಾಮತ್ ಅವರನ್ನು ಭೇಟಿ ಮಾಡಿ ಬೆಂಗರೆ ಸರಕಾರಿ ಶಾಲೆಯ ಸಮಸ್ಯೆ ಕುರಿತು ಚರ್ಚಿಸಲಾಯಿತು.
ಇಲ್ಲಿನ ಶಾಲೆಯ ಹೊಸ ತರಗತಿ ಕೊಠಡಿಯನ್ನು ಉದ್ಘಾಟಿಸಲು ಬಂದ ಅವರೊಂದಿಗೆ,
1. ಕುಸಿದಿರುವ ಶಾಲಾ ಕಾಂಪೌಂಡ್ ಪುನರ್ ನಿರ್ಮಾಣ ಹಾಗೂ
2. ಶಾಲಾ ಗ್ರಂಥಾಲಯ ನಿರ್ಮಾಣ,
3. ವಿಜ್ಞಾನ ಪ್ರಯೋಗಾಲಯ ನಿರ್ಮಾಣ,
4. ಕಂಪ್ಯೂಟರ್ ಲ್ಯಾಬ್ ಸ್ಥಾಪನೆ ಮತ್ತು ಇನ್ನಿತರ ವಿಷಯವಾಗಿ ಮನವಿಯನ್ನು ನೀಡಲಾಯಿತು.
ಈ ಎಲ್ಲಾ ಬೇಡಿಕೆಗಳನ್ನು ಸ್ವಾಗತಿಸಿದ ಶಾಸಕರು ಅವುಗಳನ್ನು ಈಡೇರಿಸಲು ಶ್ರಮಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್‌ಐಒ ಮಂಗಳೂರು ನಗರ ಅಧ್ಯಕ್ಷರಾದ ಮುಂಝಿರ್ ಅಹ್ಸನ್, ಬೆಂಗ್ರೆ ಶಾಖಾಧ್ಯಕ್ಷ ರಾಫೀ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.