ಪರಶುರಾಮ ಮೂರ್ತಿ ವಿವಾದ: ತನಿಖೆ ನಡೆಸಲು ಕಾರ್ಕಳದ ಶಾಸಕ ಸುನಿಲ್‌ ಕುಮಾರ್ ಆಗ್ರಹ

ಕಾರ್ಕಳ: ಕಾರ್ಕಳದಲ್ಲಿ ನಿರ್ಮಿಸಲಾಗಿರುವ ಪರಶುರಾಮ ಥೀಮ್‌ ಪಾರ್ಕಿನಲ್ಲಿ ಸ್ಥಾಪಿಸಲ್ಪಟ್ಟಿರುವ ʼಪರಶುರಾಮ ಮೂರ್ತಿʼ ವಿಚಾರವಾಗಿ ಕಾಂಗ್ರೆಸ್‌ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ ಪರಿಣಾಮ ಕೂಡಲೇ ಇದರ ಬಗ್ಗೆ ತನಿಖೆ ಯಾಗಬೇಕು ಎಂದು ಕಾರ್ಕಳದ ಸುನಿಲ್‌ ಕುಮಾರ್‌ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ .

“ಸ್ಥಗಿತಗೊಂಡ ಕಾಮಗಾರಿ ತಕ್ಷಣ ಆರಂಭಿಸಿ, ಶೀಘ್ರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸಿ, ಸುಳ್ಳು, ಅಪಪ್ರಚಾರ ಮಾಡುವವರ ಮೇಲೆ ಕ್ರಮಕೈಗೊಳ್ಳಿ” ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ ಸುನಿಲ್‌ ಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

“ಫೈಬರ್ ಮೂರ್ತಿಯನ್ನು ಕಂಚು ಎಂದು ಇಡೀ ಕರ್ನಾಟಕದ ಜನರ ಕಿವಿ ಮೇಲೆ ಫ್ಲವರ್ ಇಟ್ಟಿರುವ ಬಿಜೆಪಿ ತಾನು ಲೂಟಿ ಹೊಡೆಯಲು ಯಾವ ಕೆಳ ಮಟ್ಟಕ್ಕೆ ಬೇಕಿದ್ದರೂ ಇಳಿಯಬಲ್ಲದು ಎಂದು ತೋರಿಸಿಕೊಟ್ಟಿದೆ” ಎಂದು ಕಾಂಗ್ರೆಸ್ ಟ್ವೀಟ್‌ ಮಾಡಿ ಬಿಜೆಪಿ ಹಾಗೂ ಸುನಿಲ್‌ ಕುಮಾರ್‌ ವಿರುದ್ಧ ಟೀಕೆ ಮಾಡಿತ್ತು.

Latest Indian news

Popular Stories