ಸೈದಾಪುರ: ತೆಲಂಗಾಣದ ಮಕ್ತಲ ಸಮೀಪದ ರಸ್ತೆಯಲ್ಲಿ ಭಾನುವಾರ ಎರಡು ಕಾರುಗಳು ನಡುವೆ ಭೀಕರ ಅಪಘಾತ ಸಂಭವಿಸಿದ್ದು ಮಹಾರಾಷ್ಟ್ರದ ಮೂವರು ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಸೈದಾಪುರದ ಒಂದೇ ಕುಟುಂಬದ ಮೌಲಾನ್ ಸಗ್ರಿ (45), ರಹೀಮ್ ಬೇಗಂ(55) ಹಾಗೂ ಕಲೀಲ್ (33)ಎಂದು ಗುರುತಿಸಲಾಗಿದೆ.ಮಗುವಿನ ತಂದೆ ಹಾಗೂ ಸೈದಾಪುರದ ಮಡಿವಾಳಪ್ಪ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೌಲಾನ್, ರಹೀಮ್ ಸೇರಿ ನಾಲ್ವರು ತೆಲಂಗಾಣದ ಮಹಿಬೂಬ್‌ನಗರ ಜಿಲ್ಲೆಯ ಜಡ್ಚರ್ಲಾಕ್ಕೆ ಅಸ್ತಮಾ ರೋಗಕ್ಕಾಗಿ ಆಯುರ್ವೇದ ಗಿಡಮೂಲಿಕೆ ಔಷಧಿ ತರಲು ತೆರಳಿದ್ದರು. ಔಷಧಿ ಪಡೆದು ವಾಪಸ್ ಬರುವಾಗ ಮಕ್ತಲ ಸಮೀಪದ ರಸ್ತೆಯಲ್ಲಿ ಮೌಲಾನ್ ಕುಟುಂಬಸ್ಥರು ಹಾಗೂ ಮಹಾರಾಷ್ಟ್ರದ ದಂಪತಿ ಪ್ರಯಾಣಿಸುತ್ತಿದ್ದ ಕಾರುಗಳು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.