ಮುಂಬೈ: ಮಹಾರಾಷ್ಟ್ರದ ಮುಂಬೈ ಬಳಿಯ ಪನ್ವೇಲ್ನಲ್ಲಿರುವ ನಟ ಸಲ್ಮಾನ್ ಖಾನ್ ಅವರ ತೋಟದ ಮನೆಗೆ ನುಗ್ಗಲು ಪ್ರಯತ್ನಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 4ರಂದು ಈ ಘಟನೆ ನಡೆದಿದೆ. ಆರೋಪಿಗಳಾದ ಅಜೇಶ್ ಕುಮಾರ್ ಓಂಪ್ರಕಾಶ್ ಗಿಲ್ ಮತ್ತು ಗುರುಸೇವಕ್ ಸಿಂಗ್ ತೇಜ್ಸಿಂಗ್ ಸಿಖ್ ಅವರು ಅರ್ಪಿತಾ ಫಾರ್ಮ್ ಹೌಸ್ ನ ಭದ್ರತಾ ಸಿಬ್ಬಂದಿಗೆ ತಾವು ಸಲ್ಮಾನ್ ಖಾನ್ ಅವರ ಅಭಿಮಾನಿಗಳಾಗಿರುವುದರಿಂದ ಅವರನ್ನು ಭೇಟಿಯಾಗಲು ಬಯಸಿದ್ದೇವೆ ಎಂದು ಸುಳ್ಳು ಹೇಳಿ ಸಲ್ಮಾನ್ ಖಾನ್ ಅವರ ತೋಟದ ಮನೆಗೆ ನುಗ್ಗಲು ಯತ್ನಿಸಿದ್ದರು.
ಪೊದೆಗಳ ಮೇಲೆ ಹಾರಿ, ಗೋಡೆಯನ್ನು ಏರುವ ಮೂಲಕ ಮತ್ತು ಗೋಡೆಯ ಮೇಲೆ ಅಳವಡಿಸಲಾದ ಮುಳ್ಳು ತಂತಿಗಳನ್ನು ಕತ್ತರಿಸುವ ಮೂಲಕ ತೋಟದ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದರು. ಇದನ್ನು ನೋಡಿ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ