ಎರಡು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಕೊರತೆ ಇದೆ – ಸಿಎಂ ಸಿದ್ದರಾಮಯ್ಯ

ಮೈಸೂರು: ರೈತರಿಗೆ ಐದು ತಾಸು ವಿದ್ಯುತ್‌ ಪೂರೈಕೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇದಲ್ಲದೇ ಮೂರು ಫೇಸ್‌ನಲ್ಲಿ ಶೆಡ್ಯೂಲ್‌ ಮಾಡಿ ನೀಡುವಂತೆ ಸೂಚನೆ ನೀಡಲಾಗಿದ್ದು, ವಿದ್ಯುತ್‌ ಹೊರಗಿನಿಂದ ಕೊಂಡುಕೊಳ್ಳುವಂತೆ ಇದಲ್ಲದೇ ಸಕ್ಕರೆ ಫ್ಯಾಕ್ಟರಿಗಳಿಂದ ಕೂಡ ವಿದ್ಯುತ್‌ ಖರೀದಿಗೆ ಸೂಚನೆ ನೀಡಲಾಗಿದೆ ಅಂತ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಈ ಬಗ್ಗೆ ತಿಳಿಸಿದರು .ಇದೇ ವೇಳೆ ಅವರು ಮಳೆ ಇರದ ಕಾರಣ ವಿದ್ಯುತ್‌ ಚಕ್ತಿ ಪಂಪ್‌ಸೆಟ್‌ಗಳಿಗೆ ಹೆಚ್ಚಿನ ಬಳಕೆಯಾಗಿದೆ. ಕಳೆದ ಸಾರಿ ಹತ್ತು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಬಳಕೆಯಾಗಿದೆ. ಈಗ ಹದಿನಾರು ಸಾವಿರ ಮೆಗಾವಾಟ್‌ ಬಳಕೆ ಹೆಚ್ಚಾಗಿದೆ. ಸರಿ ಸುಮಾರು ಎರಡು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಕೊರತೆ ಇರುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು. ಈಗ ಮೇವಿನ ಕೊರತೆ ಇಲ್ಲ, ಆದರೆ ಮೇವನ್ನು ಶೇಖರಣೆ ಮಾಡುವಂತೆ ಸೂಚನೆನೀಡಲಾಗಿದೆ ಅಂತ ಅವರು ತಿಳಿಸಿದರು. ಕುಡಿಯುವ ನೀರಿಗೆ ತೊಂದರೆಯಾಗದಂತೆ ಸೂಚನೆ ನೀಡಲಾಗಿದ್ದು, ಖಾಸಗಿಯವರಿಂದ ಬೋರ್‌ವೆಲ್‌ ಪಡೆದುಕೊಳ್ಳುವಂತೆ ಇದಲ್ಲದೇ ಹೊಸ ಬೋರ್‌ವೆಲ್‌ ಕೂಡ ಕೊರೆಯುವಂತೆ ತಿಳಿಸಲಾಗಿದೆ ಅಂತ ಅವರು ಇದೇ ವೇಳೆ ತಿಳಿಸಿದರು.

Latest Indian news

Popular Stories