ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ನಮನೆ ಮೇಲೆ ವ್ಯಕ್ತಿಯೊಬ್ಬ ಕಲ್ಲು ಎಸೆದಿದ್ದಾನೆ. ಇಂದು ಬೆಳಗ್ಗೆ 8 ಗಂಟೆಯಲ್ಲಿ ಘಟನೆ ನಡೆದಿದ್ದು, ಕೂಡಲೇ ಪೊಲೀಸರು ಕಲ್ಲೆಸದ ವ್ಯಕ್ತಿಯನ್ನ ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರಿನ ಸತ್ಯಮೂರ್ತಿ ಎಂಬ ವ್ಯಕ್ತಿಯಿಂದ ಕಲ್ಲು ಎಸೆತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಘಟನೆ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಸದ್ಯ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈತ ಯಾಕೆ ಕಲ್ಲು ಎಸೆದ, ಇಂತಹ ಕೃತ್ಯಗಳಲ್ಲಿ ಪದೇ ಪದೇ ಭಾಗಿ ಆಗುತ್ತಿರುವುದು ಏಕೆ? ಎಂಬುವುದು ಸ್ಪಷ್ಟವಾಗಬೇಕಿದೆ. ವಿಚಾರಣೆಯಲ್ಲಿ ಈತನ ಹಿನ್ನೆಲೆ ಏನು? ಯಾಕಾಗೀ ಈತ ಈ ಕೃತ್ಯ ಎಸಗಿದ್ದಾನೆ ಎಂಬುವುದು ತಿಳಿದುಬರಬೇಕಿದೆ.