NationalCrime

ಐಸ್‌ ಕ್ರೀಮ್‌ ಖರೀದಿಸಲು ತೆರಳಿದ್ದ ತಂದೆ – ಮಕ್ಕಳ ಮೇಲೆ ಹರಿದ ಪಿಕಪ್ ವ್ಯಾನ್

ಚೆನ್ನೈ: ರಸ್ತೆಯ ಎದುರುಗಡೆಯಿಂದ ವಿರುದ್ಧ ದಿಕ್ಕಿಗೆ ಏಕಾಏಕಿ ವೇಗವಾಗಿ ಪಿಕಪ್‌ ವ್ಯಾನ್ ನುಗ್ಗಿದ ಪರಿಣಾಮ ಮೂವರು ಮಕ್ಕಳು ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂನಲ್ಲಿ ಭಾನುವಾರ (ಆ.20 ರಂದು) ನಡೆದಿದೆ.

ಭಾನುವಾರ ಮೆಟ್ಟುಪಾಳ್ಯಂ-ಕೊಯಮತ್ತೂರು ರಸ್ತೆ ತನ್ನ ಮೂವರು ಮಕ್ಕಳನ್ನು ಬೈಕ್‌ ನಲ್ಲಿ ಕೂರಿಸಿಕೊಂಡು ರಸ್ತೆ ಬದಿಯಲ್ಲಿರುವ ಐಸ್‌ ಕ್ರೀಮ್‌ ಅಂಗಡಿ ಬಳಿ ವಾಹನವನ್ನು ನಿಲ್ಲಿಸಿ ತನ್ನ ಮಕ್ಕಳನ್ನು ಬೈಕ್‌ ನಿಂದ ಕೆಳಗೆ ಇಳಿಸುತ್ತಿದ್ದರು. ಈ ವೇಳೆ ರಸ್ತೆ ಎದುರುಗಡೆಯಿಂದ ಬರುತ್ತಿದ್ದ ಪಿಕಪ್‌ ವ್ಯಾನ್ ವೊಂದು ವೇಗವಾಗಿ ವಿರುದ್ಧ ದಿಕ್ಕಿಗೆ ಚಲಾಯಿಸಿ ತಂದೆ ಹಾಗೂ ಮೂವರುಮಕ್ಕಳ ಮೇಲೆ ಹರಿದು, ಟ್ರಾಫಿಕ್‌ ಸಿಗ್ನಲ್‌ ಕಂಬಕ್ಕೆ ಢಿಕ್ಕಿ ಹೊಡೆದಿದೆ.

ಮೆಟ್ಟುಪಾಳ್ಯಂ ಟು ಕರಮಡೈ ಬರುತ್ತಿದ್ದ ವಾಹನ ಢಿಕ್ಕಿ ಹೊಡೆದ ದೃಶ್ಯ ವಾಹನವೊಂದರ ಡ್ಯಾಶ್‌ ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯ ಬಳಿಕ ಕೂಡಲೇ ಜನರು ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಘರ್ಷಣೆಯ ನಂತರ, ಹಲವಾರು ದಾರಿಹೋಕರು ಸಂತ್ರಸ್ತರಿಗೆ ಸಹಾಯ ಮಾಡಲು ಸ್ಥಳಕ್ಕೆ ಧಾವಿಸಿದರು ಮತ್ತು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಇತ್ತ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button