ಮನೆ ಹೊರಗೆ ಕಸ ಗುಡಿಸುತ್ತಿದ್ದ ವೇಳೆಯೇ ಕಾರ್ ಡಿಕ್ಕಿ: ಮಹಿಳೆ ಸಾವು

ಬುಧವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಜಾನಕಿ ಕುಮಾರಿ ಎಂದು ಗುರುತಿಸಲಾದ ಮಹಿಳೆ ತನ್ನ ಮನೆಯ ಹೊರಗೆ ಗುಡಿಸುತ್ತಿದ್ದಾಗ ಆಕೆಯ ನೆರೆಯ ಮುಕುಲ್ ರಾಥೋಡ್(25) ಚಲಾಯಿಸುತ್ತಿದ್ದ ಕಾರ್ ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾರ್ ಡಿಕ್ಕಿ ಹೊಡೆದ ನಂತರ ಜಾನಕಿ ಗಾಳಿಯಲ್ಲಿ ಹಾರಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ವಾಹನದಲ್ಲಿ ರಾಥೋಡ್ ಅವರ ಇತರ ಸಂಬಂಧಿಕರು ಇದ್ದರು ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆತನ ವಿರುದ್ಧ ಐಪಿಸಿಯ ಸೆಕ್ಷನ್ 279(ಅತಿ ವೇಗದ ಚಾಲನೆ) ಮತ್ತು 304 ಎ(ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

Latest Indian news

Popular Stories