ಉ.ಕ | ಸಿದ್ದಾಪುರದ ಅರೆಂದೂರಿನಲ್ಲಿ ಐದು ವರ್ಷದ ಮಗು ಮೃತ್ಯು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅರೆಂದೂರಿನಲ್ಲಿ ಐದು ವರ್ಷದ ಹೆಣ್ಣು ಮಗು ಮಂಗನ ಕಾಯಿಲೆಯಿಂದ ಮೃತಪಟ್ಟಿದೆ ಎಂದು ಹೇಳಲಾದೆ.

ತೀವ್ರ ಜ್ವರದ ಕಾರಣ ಮಣಿಪಾಲ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು‌ . ಆದರೆ ಬಹು ಅಂಗಾಂಗ ವೈಫಲ್ಯ ಕಾರಣ ಮಗು ಬದುಕಿ ಉಳಿಯಲಿಲ್ಲ ಎನ್ನಲಾಗಿದೆ. ಈ ವರ್ಷ ಮಂಗನ ಕಾಯಿಲೆಗೆ ಜಿಲ್ಲೆಯಲ್ಲಿ 9 ಸಾವು ಆದಂತಾಗಿದೆ. ಸಿದ್ದಾಪುರ ತಾಲೂಕಿನಲ್ಲಿ 90 ಜನರಿಗೆ ಮಂಗನ ಕಾಯಲೆ ಬಂದ ಬಗ್ಗೆ ವರದಿಯಾಗಿತ್ತು. ಇದರಲ್ಲಿ 91 ಜನರ ಆರೋಗ್ಯ ಸಹಜ ಸ್ಥಿತಿಗೆ ಮರಳಿದೆ. ಜಿಲ್ಲೆಯ ಇತರೆ ತಾಲೂಕಿನಲ್ಲಿ 9 ಜನರಿಗೆ ಮಂಗನ ಕಾಯಿಲೆ ಬಂದ ವರದಿಯಾಗಿತ್ತು. ಎಲ್ಲರೂ ಮಂಗನ ಕಾಯಿಲೆ ಜ್ವರದಿಂದ ಮರಳಿ ಸುಧಾರಿಸಿಕೊಂಡಿದ್ದಾರೆ. ಮಂಗನ ಕಾಯಿಲೆಗೆ ಲಸಿಕೆ ಕಂಡು ಹಿಡಿಯಲು ಆರೋಗ್ಯ ಇಲಾಖೆಯ ತಜ್ಞರಿಗೆ ಸರ್ಕಾರ ಸೂಚಿಸಿದೆ.

Latest Indian news

Popular Stories