ಕೇಂದ್ರ ಅಲ್ಪಸಂಖ್ಯಾತ ವಿದ್ಯಾರ್ಥಿಗಳ “ವಿದ್ಯಾರ್ಥಿ ವೇತನ” ದಲ್ಲಿ ದೊಡ್ಡ ಹಗರಣ

ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದಲ್ಲಿ 22 ಸಾವಿರ ಕೋಟಿಯ ದೊಡ್ಡ ಹಗರಣವೊಂದರ ಕುರಿತು new24 ವರದಿ ಮಾಡಿದೆ. ಇದೀಗ ಜುಲೈ 10 ರಂದು ತನಿಖೆ ನಡೆಸಲು ಅಲ್ಪಸಂಖ್ಯಾತ ಸಚಿವಾಲಯ ಸಿಬಿಐಗೆ ವಹಿಸಿದೆ. ಸುಮಾರು 500 ಕೋಟಿ ತನಕ ಹಗರಣವಾಗಿರುವ ಸಾಧ್ಯತೆಯಿದೆ. ಇದೀಗ 145 ಕೋಟಿ ಹಗರಣ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ 2007 ರಿಂದ 2022 ವರೆಗೆ ಈ ಹಗರಣ ನಡೆದಿದ್ದು ಹಗರಣಕ್ಕೆ ನಕಲಿ ಸಂಸ್ಥೆ ಮತ್ತು‌ವಿದ್ಯಾರ್ಥಿಗಳ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂದು ನ್ಯೂಸ್ 24 ವರದಿ ಮಾಡಿದೆ. ಸುಮಾರು 800 ಕ್ಕೂ ಅಧಿಕ ನಕಲಿ ಸಂಸ್ಥೆಗಳು ಪತ್ತೆಯಾಗಿದ್ದು ಒಂದು ಲಕ್ಷಕ್ಕೂ ಅಧಿಕ ಸಂಸ್ಥೆಗಳ ಕುರಿತು ಮಾಹಿತಿ ಪರಿಶೀಲನೆ ನಡೆಸಿದರೆ ಹಗರಣದ ಮೊತ್ತ 500 ಕೋಟಿವರೆಗೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Latest Indian news

Popular Stories