ಮಗನಿಗೆ ಟಿಕೇಟ್ ಸಿಗಲಿಲ್ಲವೆಂದು ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ : ಈಶ್ವರಪ್ಪ ವಿರುದ್ಧ ಯಡಿಯೂರಪ್ಪ ಕಿಡಿ

ನವದೆಹಲಿ : ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆಗೆ ಬಿಎಸ್ ಯಡಿಯೂರಪ್ಪ ಆಕ್ರೋಶ ಹೊರಹಾಕಿದ್ದು ಇಂತಹ ಬೇಜಾಬ್ದಾರಿತನ ಹೇಳಿಕೆಗೆ ನಾನು ಉತ್ತರ ನೀಡುವುದಿಲ್ಲ ಎಂದು ತಿಳಿಸಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಬೇಜವಾಬ್ದಾರಿ ಹೇಳಿಕೆಗೆ ನಾನು ಉತ್ತರ ಕೊಡುವುದಿಲ್ಲ ಜನ ಉತ್ತರ ಕೊಡುತ್ತಾರೆ.ವಿಜಯೇಂದ್ರ ರಾಜ್ಯ ಅಧ್ಯಕ್ಷ ಆದ ಮೇಲೆ ಪಕ್ಷ ಯಾವ ರೀತಿ ಬೆಳೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದ್ದರೂವಂತಹ ಸಂಗತಿಯಾಗಿದೆ

ಈಶ್ವರಪ್ಪನವರು ಅವರ ಮಗನಿಗೆ ಟಿಕೆಟ್ ಸಿಗಲಿಲ್ಲ ಎಂದು ಒಂದೇ ಕಾರಣಕ್ಕೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಸರಿಯಲ್ಲ ಯಾವುದೇ ತೀರ್ಮಾನ ತೆಗೆದುಕೊಳ್ಳುವದಿದ್ದರೂ ಚುನಾವಣೆ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಗುತ್ತೆ. ಯಡಿಯೂರಪ್ಪ ವೈಯಕ್ತಿಕವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದರು.

ಅನಗತ್ಯವಾಗಿ ಯಡಿಯೂರಪ್ಪ ಅವರನ್ನು ಸೀಟು ಕೊಡಿಸಲ್ಲ ಎಂದು ಹೇಳುತ್ತಿದ್ದಾರೆ ಬಹುಶ ಎರಡು ಮೂರು ದಿನದಲ್ಲಿ ಅವರು ಅರ್ಥ ಮಾಡಿಕೊಂಡು ಸರಿ ಹೋಗುತ್ತಾರೆ ಎಂದು ಭಾವಿಸುತ್ತೇನೆ ಎಂದು ಅವರು ತಿಳಿಸಿದರು.

ಮಾಧುಸ್ವಾಮಿ ಹಾಗೂ ಇನ್ ಯಾರು ಇದ್ದಾರೆ ಮಾತನಾಡುತ್ತೇನೆ. ಅವರೆಲ್ಲರ ಜೊತೆ ನಾನು ಚುನಾವಣೆ ಗೆಲ್ಲಬೇಕಾಗಿದೆ. ಸೋಮಣ್ಣ ಅವರಿಗೆ ಚುನಾವಣೆಗೆ ನಿಲ್ಲಬೇಕು ಎಂಬ ಅಪೇಕ್ಷೆಯಿಂದ ಆ ರೀತಿ ಮಾತನಾಡಿದ್ದಾರೆ.ಅವರ ಜೊತೆ ಮಾತನಾಡಿ ಎಲ್ಲವನ್ನು ಸರಿ ಮಾಡುವಂತಹ ಪ್ರಯತ್ನ ಮಾಡುತ್ತೇನೆ. ಕರಡಿ ಸಂಗಣ್ಣ ಅವರ ಜೊತೆಗೆ ನಾಲ್ಕು ಐದು ಬಾರಿ ಕರೆ ಮಾಡಿ ಮಾತನಾಡಿದ್ದೇನೆ ಎಂದರು.

Latest Indian news

Popular Stories