ಲಖಿಂಪುರ: ಆಫ್ರಿಕನ್ ಹಂದಿ ಜ್ವರದ ಸೋಂಕನ್ನು ಹರಡುವುದನ್ನು ತಡೆಯಲು ಅಸ್ಸಾಂನ ಲಖಿಂಪುರದಲ್ಲಿ ಪಶುವೈದ್ಯರ ತಂಡವು 1,000 ಕ್ಕೂ ಹೆಚ್ಚು ಹಂದಿಗಳನ್ನು ಕೊಂದಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಖಿಂಪುರ ಜಿಲ್ಲೆಯ ಪಶುಸಂಗೋಪನೆ ಮತ್ತು ಆರೋಗ್ಯ ಅಧಿಕಾರಿ ಕುಲಧರ್ ಸೈಕಿಯಾ ಅವರ ಮಾಹಿತಿಯಂತೆ, “ಲಖಿಂಪುರ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿಜ್ವರ ಸೋಂಕು ಹೆಚ್ಚಾಗಿ ಕಂಡು ಬಂದ ಹಿನ್ನೆಲೆಯಲ್ಲಿ 10 ವೈದ್ಯರ ತಂಡವು ವಿದ್ಯುತ್ ಆಘಾತದ ಮೂಲಕ ಸುಮಾರು 1,000 ಕ್ಕೂ ಹೆಚ್ಚು ಹಂದಿಗಳನ್ನು ವಿದ್ಯುತ್ ಶಾಕ್ ಮೂಲಕ ಕೊಲ್ಲಲಾಯಿತು ಎಂದು ಹೇಳಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ರೋಗ ಹರಡುವುದನ್ನು ತಡೆಯಲು ಸರ್ಕಾರವು 27 ಕೇಂದ್ರಗಳಲ್ಲಿ ಹರಡಿರುವ 1,378 ಹಂದಿಗಳನ್ನು ಕೊಂದಿದೆ ಎಂದು ಆರೋಗ್ಯಾಧಿಕಾರಿ ಹೇಳಿದರು.
ಈ ವರ್ಷದ ಆರಂಭದಲ್ಲಿ, ದೇಶದ ಕೆಲವು ರಾಜ್ಯಗಳಲ್ಲಿ ಏವಿಯನ್ ಇನ್‌ಫ್ಲುಯೆಂಜಾ ಮತ್ತು ಆಫ್ರಿಕನ್ ಹಂದಿ ಜ್ವರ ಹರಡಿದ ಬಳಿಕ ಅಸ್ಸಾಂ ಸರ್ಕಾರವು ಹೊರ ರಾಜ್ಯಗಳಿಂದ ರಾಜ್ಯಕ್ಕೆ ಕೋಳಿ ಮತ್ತು ಹಂದಿಗಳ ಪ್ರವೇಶವನ್ನು ನಿಷೇಧಿಸಿತು.