ಸಿದ್ದರಾಮಯ್ಯ ಮುಸಲ್ಮಾನರ ದತ್ತು ಪುತ್ರ: ಕೆ.ಎಸ್ ಈಶ್ವರಪ್ಪ ವಾಗ್ದಾಳಿ

ಮೈಸೂರು: ಸಿದ್ದರಾಮಯ್ಯ ಮುಸಲ್ಮಾನರ ದತ್ತು ಪುತ್ರರಾಗಿದ್ದಾರೆ. ಮುಸಲ್ಮಾನರ ಜಾಗದಲ್ಲಿ ನಿಂತು ನರೇಂದ್ರ ಮೋದಿ, ಪ್ರತಾಪ್ ಸಿಂಹ ವಿರುದ್ಧ ಮಾತನಾಡಿಬಿಟ್ಟರೆ ಕಾಂಗ್ರೆಸ್‌ಗೆ ಮತ ಬರುತ್ತದೆ ಎಂದುಕೊಂಡಿದ್ದಾರೆ. ಅದೇ ಕಾರಣಕ್ಕೆ ಮುಸಲ್ಮಾನರ ಎದುರು ಭಾಷಣ ಮಾಡಿದ್ದಾರೆ. ಇದೆಲ್ಲ ಮುಂದಿನ ಚುನಾವಣೆಯಲ್ಲಿ ನಡೆಯಲ್ಲ‌ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಲಾಟರಿ ಮುಖ್ಯಮಂತ್ರಿ. ಅವರು ಯಾವಾಗಲೂ ತಮ್ಮ ಶಕ್ತಿ ಮೇಲೆ ಸಿಎಂ ಆಗಿಲ್ಲ.  2013ರಲ್ಲಿ ಕೆಜೆಪಿ- ಬಿಜೆಪಿ ಅಂತ ವಿಭಾಗವಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಈ ಬಾರಿ ಗ್ಯಾರಂಟಿ ಹೇಳಿಕೊಂಡು ಸಿಎಂ ಆಗಿಬಿಟ್ಟರು.  ಸಿದ್ದರಾಮಯ್ಯ ಅಪ್ಪಿತಪ್ಪಿ ಸಿಎಂ ಆಗಿದ್ದಾರೆ. ಮುಂದೆ ಲೋಕಸಭೆ ಚುನಾವಣೆ ಬರುತ್ತಿದೆ. ಕಾಂಗ್ರೆಸ್‌ನವರ ಸ್ಥಿತಿ ಏನೆಂದು ಗೊತ್ತಾಗುತ್ತದೆ. ಗ್ಯಾರಂಟಿ ಯೋಜನೆಗಳು ಏನಾಗುತ್ತದೆಂದು ನೋಡುತ್ತಿರಿ ಎಂದರು.

ಭಸ್ಮವಾಗ್ತಾರೆ: ಸನಾತನ ಹಿಂದೂ ಧರ್ಮ ಮಲೇರಿಯಾ ಡೆಂಗ್ಯೂ ಇದ್ದಂತೆ ಎಂಬ ಉದಯ ಸ್ಟಾಲಿನ್ ಹೇಳಿಕೆ ವಿಚಾರಕ್ಕೆ ಕಿಡಿಕಾರಿದ ಈಶ್ವರಪ್ಪ, ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದರೆ ಭಸ್ಮವಾಗ್ತಾರೆ. ಇವನೇನು ಆಕಾಶದಿಂದ ಇಳಿದು ಬಂದಿಲ್ಲ. ತಾಕತ್ತಿದ್ದರೆ ಅವನ ಧರ್ಮಕ್ಕೆ ಟೀಕೆ ಮಾಡಲಿ, ಮುಸ್ಲಿಂ ಧರ್ಮಕ್ಕೆ ಟೀಕೆ ಮಾಡಲಿ ನೋಡೋಣ ಎಂದರು.

Latest Indian news

Popular Stories