ಟಿ ಶೆಟ್ಟಿ ಗೇರಿಯಲ್ಲಿ ಪತಿಯನ್ನು ಕೊಂದು ಪತಿ ಆತ್ಮಹತ್ಯೆ

ಪತ್ನಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀಮಂಗಲ ಸಮೀಪದ ಟಿ.ಶೆಟ್ಟಿ ಗೇರಿಯ ಲೈನ್ ಮನೆ ಒಂದರಲ್ಲಿ ನಡೆದಿದೆ.

ತೋಟವೊಂದರ ಕೂಲಿ ಕಾರ್ಮಿಕ ಪಣಿ ಎರವರ ಮಂಜು ಡಿಸೆಂಬರ್ 17ರ ರಾತ್ರಿ ಪಾನಮತ್ತನಾಗಿ ಬಂದು ತನಗೆ ಮಕ್ಕಳಾಗದಿರುವ ಬಗೆ ತನ್ನ ಹೆಂಡತಿಯೊಂದಿಗೆ ಜಗಳ ತೆಗೆದು ನಂತರ ಹೆಂಡತಿ ಪಣಿ ಎರವರ ನಂದಿನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಪತ್ನಿ ಮೃತಪಟ್ಟಿರೋದನ್ನು ಕಂಡು ತಾನು ಕೂಡ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶ್ರೀಮಂಗಲ ಪೊಲೀಸರು ಮೊಖದಮೆಯನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Latest Indian news

Popular Stories