ಉಡುಪಿ, ಫೆ.5: ನಿವೃತ್ತ ಸರಕಾರಿ ಪಶು ವೈದ್ಯಾಧಿಕಾರಿ ಡಾ.ಜಮೀರ್ ಅಹ್ಮದ್(78) ಫೆ.3ರಂದು ಹೃದಯಾಘಾತದಿಂದ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಾರ್ಕಳ ಬೈಲೂರು ಮೂಲದ ಉಡುಪಿ ನಿವಾಸಿಯಾಗಿರುವ ಇವರು ಉಡುಪಿ, ಕಾರ್ಕಳ, ಪುತ್ತೂರು ಸುಳ್ಯದಲ್ಲಿ ಹಲವು ವರ್ಷಗಳ ಕಾಲ ಸರಕಾರಿ ಪಶು ವೈದ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ