ಕುಂದಾಪುರ: ನಿಜಾಮ್ ಬಾಗ್ ಕಾಂಪೌಂಡ್ ನಿವಾಸಿ ಶೇಖ್ ಹಸನ್ ಸಾಹೇಬ್ ನಿಧನ

ಕುಂದಾಪುರ, ಸೆ.17: ಅರಣ್ಯ ಇಲಾಖೆಯಲ್ಲಿ ಚಾಲಕರಾಗಿ ದುಡಿದು ನಿವೃತ್ತರಾದ ಕುಂದಾಪುರ ನಿಜಾಮ್ ಬಾಗ್ ಕಾಂಪೌಂಡ್ ನಿವಾಸಿ ಶೇಖ್ ಹಸನ್ ಸಾಹೇಬ್ (93) ವಯೋ ಸಹಜತೆಯಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.

ಇವರು ಸುಮಾರು 35 ವರ್ಷಗಳ ಕಾಲ ಕುಂದಾಪುರದಲ್ಲಿ ಅರಣ್ಯ ಇಲಾಖೆ ಚಾಲಕರಾಗಿ ದುಡಿದಿದ್ದರು. ಇವರು ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Latest Indian news

Popular Stories