ಪ್ರವಾದಿ ಮುಹಮ್ಮದ್ (ಸ) ಜೀವನ ಸಂದೇಶ ಅಭಿಯಾನ

ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ವತಿಯಿಂದ ‘ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್’ ಎಂಬ ಧ್ಯೇಯವಾಕ್ಯದಡಿ ಪ್ರವಾದಿ ಜೀವನ ಸಂದೇಶ ಅಭಿಯಾನವನ್ನು 2023, ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 6ರವರೆಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ನಡೆಯಲಿರುವ ಈ ಅಭಿಯಾನದಲ್ಲಿ ಪ್ರವಾದಿಯವರ ಕುರಿತು ಪುಸ್ತಕ ಬಿಡುಗಡೆ, ವಿಚಾರಗೋಷ್ಟಿ, ಸಮಾವೇಶಗಳು, ಪ್ರಬಂಧ ಸ್ಪರ್ಧೆ, ರಕ್ತದಾನ ಶಿಬಿರ, ಶುಚಿತ್ವ ಅಭಿಯಾನ, ಆಸ್ಪತ್ರೆ, ಅನಾಥಾಲಯ, ವೃದ್ಧಾಶ್ರಮ ಭೇಟಿ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆಯಂತಹ ಸಮಾಜ ಸೇವಾ ಚಟುವಟಿಕೆಗಳು, ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪರಸ್ಪರ ತಪ್ಪುಕಲ್ಪನೆಗಳು, ಪೂರ್ವಾಗ್ರಹಗಳು, ದ್ವೇಷದ ವಾತಾವರಣವನ್ನು ನಿವಾರಿಸಿ ಶಾಂತಿ, ಸಹಬಾಳ್ವೆ, ಪರಸ್ಪರರನ್ನು ಅರಿಯುವಂತಹ ಉದ್ದೇಶದಿಂದ ಜಮಾಅತೆ ಇಸ್ಲಾಮೀ ಹಿಂದ್ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಜನತೆಯ ಸಹಕಾರವನ್ನು ಕೋರಲಾಗಿದೆ.

Latest Indian news

Popular Stories