PRESS RELEASE / ORGANISATIONS

ಜಾಮಿಯಾ ಮಸ್ಜಿದ್ ಜದೀದ್ ಕಲಾನ್ ಕೊಂಬಗುಡ್ಡೆ: ಅಧ್ಯಕ್ಷರಾಗಿ ಶಬೀಹ್ ಅಹಮದ್ ಕಾಝಿ, ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಅಲಿ ಕಾಪು ಪುನರಾಯ್ಕೆ

ಜಾಮಿಯಾ ಮಸ್ಜಿದ್ ಜದೀದ್ ಕಲಾನ್ ಕೊಂಬಗುಡ್ಡೆ ಮಲ್ಲಾರ್, ಕಾಪು ಇದರ ಮಹಾಸಭೆ ಜರಗಿದ್ದು , ಕಾರ್ಯಕಾರಿ ಸಮಿತಿಗೆ 7 ಮಂದಿ ಆಯ್ಕೆಯಾದ ನಂತರ, ಅಧ್ಯಕ್ಷರಾಗಿ ಜನಾಬ್ ಶಬೀಹ್ ಅಹಮದ್ ಕಾಝಿ, ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಅಲಿ ಕಾಪು ಉಪಾಧ್ಯಕ್ಷರಾಗಿ ಅಷ್ಪಾಕ್ ಅಬ್ದುಲ್ ಅಲಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಇಕ್ಬಾಲ್ ಸಾಹೇಬ್ ಮುಂದಿನ ಸಾಲಿಗೆ ಪುನರಾಯ್ಕೆಯಾದರು.

ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಅಲಿ ಇಬ್ರಾಹಿಂ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಹಾಶಿಮ್ ಸಾಹೇಬ್, ಶೇಕ್ ಮುಸ್ತಾಕ್ ಬಾಪು, ಸಲಹೆಗಾರರಾಗಿ ಜನಾಬ್ ಮುಹಮ್ಮದ್ ಅಸ್ಲಮ್ ಕಾಝಿ ಆಯ್ಕೆಯಾದರು.
ಮಸ್ಜಿದ್ ನ ಖತೀಬ್ ವ ಇಮಾಮ್ ಮೌಲನಾ ಮುಹಮ್ಮದ್ ಪರ್ವೇಜ್ ಆಲಂ ನದ್ವಿ ಯವರ ಕುರ್ ಆನ್ ಪಠನದೊಂದಿಗೆ ಸಭೆ ಪ್ರಾರಂಭವಾಯಿತು. ಜನಾಬ್ ಶಭಿ ಅಹಮದ್ ಕಾಝಿ ಸ್ವಾಗತಿಸಿದರು.ಅನ್ವರ್ ಅಲಿ ಕಳೆದ ಸಾಲಿನ ವರದಿ ಮಂಡಿಸಿದರು. ಲೆಕ್ಕ ಪತ್ರವನ್ನು ಮುಹಮ್ಮದ್ ಇಕ್ಬಾಲ್ ಸಾಹೇಬ್ ಮುಂದಿಟ್ಟರು.
ಜನಾಬ್ ಮುಹಮ್ಮದ್ ಅಸ್ಲಮ್ ಕಾಝಿಯವರು ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಅನ್ವರ್ ಅಲಿ ಧನ್ಯವಾದ ನೀಡಿದರು. ಮೌಲಾನಾರ ದುವಾದೊಂದಿಗೆ ಸಭೆಯು ಮುಕ್ತಾಯಗೊಂಡಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button