ರಾಯಚೂರು : ಚುನಾವಣಾ ಸಿಬ್ಬಂದಿಗಳ ನಿಯೋಜನೆ

ಮಸ್ಕಿ(ರಾಯಚೂರು)ಏ.೧೬:-ಜಿಲ್ಲೆಯ ಮಸ್ಕಿ ವಿಧಾನಸಭೆ ಉಪಚುನಾವಣೆಗಾಗಿ ಒಟ್ಟು ೩೦೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಗತ್ಯ ಸಿಬ್ಬಂದಿಯನ್ನು ಮತದಾನ ರ‍್ಯಕ್ಕೆ ನೇಮಿಸಲಾಗಿದೆ. ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ಸಿಬ್ಬಂದಿಯನ್ನು ಮೊದಲು ರ‍್ಮಲ್ ಸ್ಕ್ರಿನಿಂಗ್ ಗೆ ಒಳಪಡಿಸಲಾಯಿತು. ಬೆಳಿಗ್ಗೆ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.
೭೩೯ ಪೊಲೀಸ್ ಪೇದೆಗಳು , ಮುಖ್ಯ ಪೇದೆಗಳು, ೭೧ ಎಎ, ೨೫ ಪಿಎಸ್‌ಐ ೭ ಸಿಪಿಐ, ೩ ಡಿವೈಎಸ್ಪಿ, ಒಂದು ಸಿಆರ್ ಪಿಎಫ್ ತಂಡ, ೩ ಕೆಎಸ್‌ಆರ್ಪಿ ತಂಡಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮತದಾನ ಪ್ರಕ್ರಿಯೆಗೆ ಮಾಡಿಕೊಂಡ ರ‍್ವ ಸಿದ್ದತೆಗಳನ್ನು ಪರಿಶೀಲಿಸಿದರು.
ಈ ಸರ‍್ಭದಲ್ಲಿ ಚುನಾವಣಾ ವೀಕ್ಷಕ ಶ್ರೀಧರ್ ಬಾಬು ಅಡ್ಡಂಕಿ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಚುನಾವಣಾಧಿಕಾರಿ ರಾಜಶೇಖರ ಡಂಬಳ ಇತರರು ಇದ್ದರು..

Latest Indian news

Popular Stories