ರಾಯಚೂರಿನಿಂದ ನಾಳೆ ಹಾಸನ ಚಲೋ


ರಾಯಚೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಮೇ 30 ರಂದು ಹಾಸನ ಚಲೋ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಸಂಚಾಲಕ ಕೆ.ಜಿ.ವಿರೇಶ ತಿಳಿಸಿದ್ದಾರೆ.


ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಶಾಸಕ ಎಚ್.ಡಿ.ರೇವಣ್ಣ ನವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ನೊಂದಿರುವ ಸಾವಿರಾರು ಮಹಿಳೆಯರ ರಕ್ಷಣೆಗೆ ಹಾಗೂ ಪ್ರಜ್ವಲ್ ರೇವಣ್ಣನ ಬಂಧನಕ್ಕೆ ಆಗ್ರಹಿಸಿ ಮೇ 30 ರಂದು ಹಾಸನದಲ್ಲಿ ನಡೆಯುವ ‘ಹೋರಾಟದ ನಡಿಗೆ, ಹಾಸನ ಕಡೆಗೆ’ ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆಗೆ ರಾಯಚೂರು ಜಿಲ್ಲೆಯ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸುಮಾರು 200ಕ್ಕೂ ಹೆಚ್ಚಿನ ಜನ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ಕೆ.ಜಿ ವೀರೇಶ ತಿಳಿಸಿದ್ದಾರೆ.


ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ ಇಡೀ ನಾಡು ತಲೆತಗ್ಗಿಸುವಂತಾಗಿದೆ. ಇದೊಂದು ನಾಚಿಕೆಗೇಡಿನ ವಿಚಾರ. ಮಹಿಳೆಯರು ಭಯದಿಂದ ಬದುಕುತ್ತಿದ್ದಾರೆ. ಹಾದಿ- ಬೀದಿಗಳಲ್ಲಿ ಹೆಣ್ಣುಮಕ್ಕಳ ಮಾನ- ಪ್ರಾಣ ಹರಣವಾಗುತ್ತಿದೆ. ಈ ಘಟನೆ ದೌರ್ಜನ್ಯವಲ್ಲದೇ ಲೈಂಗಿಕ ಭಯೋತ್ಪಾದನೆವಾಗಿದೆ ಎಂದು ದೂರಿದ್ದಾರೆ.


ಸರ್ಕಾರಕ್ಕೆ ಆರೋಪಿಯನ್ನು ಬಂಧಿಸಲು ಆಗದ ಕಾರಣ ಆಡಳಿತ ವ್ಯವಸ್ಥೆಯ ಮೇಲೆ ಜನರ ಭರವಸೆ ಕಳೆದುಕೊಂಡಿದೆ. ಆರೋಪಿಯನ್ನು ಬಂಧಿಸದ ಕಾರಣ ಪ್ರಕರಣದ ಗಭಿರಂತೆ ಕಡಿಮೆ ಮಾಡುವ ಹಾಗೂ ಸಂತ್ರಸ್ತರನ್ನು ಅಪರಾಧಿಗಳನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

Latest Indian news

Popular Stories