ರಾಯಚೂರು :’ಸರ್ಕಾರಿ ಶಾಲೆ’ಯ ಮೇಲ್ಚಾವಣಿ ಕುಸಿದು ‘ನಾಲ್ವರು ಮಕ್ಕಳಿಗೆ ಗಾಯ’

ರಾಯಚೂರು:ರಾಯಚೂರಲ್ಲಿ ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿದು ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ನಡೆದಿದೆ.

ರಾಯಚೂರು ತಾಲೂಕಿನ ಅರಸಿಗೇರ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿತಗೊಂಡು ನಾಲ್ವರು ಮಕ್ಕಳು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಗಾಯಾಳು ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿತ ಘಟನೆಯಲ್ಲಿ ಚಂದ್ರಿಕಾ ಸೇರಿದಂತೆ ನಾಲ್ವರು ವಿದ್ಯಾರ್ಥಿನಿಯರಿಗೆ ಸಮ್ಣಪುಟ್ಟ ಗಾಯವಾಗಿರೋದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Latest Indian news

Popular Stories