ಇನ್‌ಫೋಸಿಸ್: ಅರ್ಜಿ ಆಹ್ವಾನ

ರಾಯಚೂರು, ಜು.೨೩, (ಕ.ವಾ):- ಬೆಂಗಳೂರಿನ ಇನ್‌ಫೋಸಿಸ್ ಬಿ.ಪಿ.ಎಮ್ ಸಂಸ್ಥೆಯ ವತಿಯಿಂದ ಮೈಸೂರು, ಚೆನ್ನೆöÊ, ಹೈದ್ರಾಬಾದ್ ಮತ್ತು ಪುಣೆ ನಗರಗಳ ಬಿ.ಪಿ.ಓ. ಸಂಸ್ಥೆಯಲ್ಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ವಿಕಲಚೇತನ ಪದವೀಧರ ನಿರುದ್ಯೋಗಿ ಅಭ್ಯರ್ಥಿಗಳಿಂದ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿಕಲಚೇತನ ಪದವೀಧರರು ಇತ್ತೀಚೆಗೆ ಪದವಿ ಪಡೆದಿರುವ ಅಥವಾ ೨ ವರ್ಷಗಳ ಅನುಭವ ಹೊಂದಿರುವ ಮೂಳೆ ವೈಕಲ್ಯ, ಕುಬ್ಜ ಹಾಗೂ ಆಸಿಡ್ ದಾಳಿಯಿಂದ ಪಾರಾದ ವಿಕಲಚೇತನ ಅಭ್ಯರ್ಥಿಗಳು ಈ ನೇಮಕಾತಿ ಡ್ರೆöÊವ್‌ನಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.

ಉತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯ, ಉತ್ತಮ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳು ೩ರಿಂದ ೪ಹಂತದ ಆನ್‌ಲೈನ್ ಪರೀಕ್ಷೆಗಳ ಮೂಲಕ ನೇಮಕಾತಿ ಡ್ರೆöÊವ್‌ನಲ್ಲಿ ಪಾಲ್ಗೋಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣ ಸಂಖ್ಯೆ: ೯೯೮೬೯೩೮೩೬೮, ೮೦೭೩೬೧೦೪೪೨ಗೆ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories