ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

ರಾಯಚೂರು, ಜೂ.೨೧, (ಕ.ವಾ):- ಜಿಲ್ಲೆಯಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರಾಯಚೂರು ಜಿಲ್ಲೆಯಾದ್ಯಂತ ಇದೇ ಜೂನ್ ೨೧ರಿಂದ ಜುಲೈ ೦೫ರ ವರೆಗೆ ಪ್ರತಿದಿನ ರಾತ್ರಿ ೭ ಗಂಟೆಯಿAದ ಮರು ದಿನ ಬೆಳಿಗ್ಗೆ ೫ ಗಂಟೆಯ ವರೆಗೆ ರಾತ್ರಿ ಕರ್ಪೂ ಹಾಗೂ ೨೦೨೧ರ ಜೂ.೨೫ರ ಶುಕ್ರವಾರ ರಾತ್ರಿ ೭ ಗಂಟೆಯಿAದ ಜೂ.೨೮ರ ಸೋಮವಾರ ಬೆಳಿಗ್ಗೆ ೫ ಗಂಟೆಯವರೆಗೆ ಮತ್ತು ಜು.೨ರ ಶುಕ್ರವಾರ ರಾತ್ರಿ ೭ ಗಂಟೆಯಿAದ ಜು.೫ರ ಸೋಮವಾರ ಬೆಳಿಗ್ಗೆ ೫ ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವ ಅವಧಿಯಲ್ಲಿ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಹಾಗೂ ಜನಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ಗುಂಪು ಸೇರುವುದನ್ನು ಮತ್ತು ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ನಿರ್ಬಂಧಿಸಿ, ೧೯೭೩ ದಂಡ ಪ್ರಕ್ರಿಯೆ ಸಂಹಿತೆ ಕಲಂ ೧೪೪ ರನ್ವಯ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ನಿಷೇಧಾಜ್ಞೆ ಜಾರಿಗೊಳಿಸಿ, ಆದೇಶ ಹೊರಡಿಸಿದ್ದಾರೆ.

Latest Indian news

Popular Stories