ರಿಮ್ಸ್ನಲ್ಲಿ ಹೆಚ್ಚುವರಿ ೨೦ ಐಸಿಯು ಬೆಡ್‌ಗಳ ಸೇವೆಗೆ ಡಿಸಿಎಂ ಚಾಲನೆ

ರಾಯಚೂರು, (ಕ.ವಾ):- ಅತ್ಯಂತ ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ಸೋಂಕಿತರಿಗೆ ಅತಿ ತುರ್ತಾಗಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ೨೦ ಐಸಿಯು ಬೆಡ್‌ಗಳ ಸೇವೆಗೆ ರಾಜ್ಯದ ಉಪ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸವದಿ ಅವರು ಇದೇ ಮೇ.೧೮ರ ಮಂಗಳವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ರಿಮ್ಸ್ಗೆ ದಾಖಲಾಗುವ ಕೋವಿಡ್ ರೋಗಿಗಳಿಗೆ ರೆಸ್ಪಿರೇಟರಿ ಹಾಗೂ ಟ್ರಯಾಜ್ ಮಾಡಲು ಅನುಕೂಲವಾಗುವಂತೆ ೨೦ ಬೆಡ್‌ಗಳ ಐಸಿಯು ಸೇವೆಗೆ ಚಾಲನೆ ನೀಡಲಾಗಿದೆ, ಇದರಿಂದ ರೋಗಿಗಳಿಗೆ ಸಮಯ ವ್ಯರ್ಥವಾಗದಂತೆ ಚಿಕಿತ್ಸೆ ನೀಡಿ ಅವರನ್ನು ಪ್ರಾಣಾಪಾಯದಿಂದ ಪಾರುಮಾಡಬಹುದಾಗಿದೆ ಎಂದರು. 

ಎರಿಮ್ಸ್ಗೆ ಅಗತ್ಯ ಇರುವ ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಲಾಗಿದೆ, ನಿರಂತರ ನಿಗಾವಹಿಸಿ ಆಸ್ಪತ್ರೆಯ ಚಿಕಿತ್ಸಾ ರೀತಿಯನ್ನು ಮೇಲುಸ್ತುವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಂತರ ಅವರು ರೋಗಿಗಳೊಂದಿಗೆ ಚರ್ಚಿಸಿ, ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳು, ಚಿಕಿತ್ಸೆಗಳು ಹಾಗೂ ಔಷಧೋಪಚಾರಗಳ ಕುರಿತು ಮಾಹಿತಿ ಪಡೆದುಕೊಂಡರು.

ಭರವಸೆ: ಓಪೆಕ್ ಮತ್ತು ರಿಮ್ಸ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಗ್ರೂಪ್ ನೌಕರರ ವೇತನ ಹೆಚ್ಚಳದ ಕುರಿತು ಇದೇ ಸಂದರ್ಭದಲ್ಲಿ ನೌಕರ ಮನವಿ ಸ್ವೀಕರಿಸಿದ ಉಪ ಮುಖ್ಯಮಂತ್ರಿಗಳು, ಅಧಿಕಾರಿಗಳೊಂದಿಗೆ ಸಮಾಲೋಚಿಸಿ ವೇತನ ಹೆಚ್ಚಳಕ್ಕೆ ನಿರ್ಧರಿಸುವದಾಗಿ ಭರವಸೆ ನೀಡಿದರು.

ನೌಕರರಿಗೆ ವೇತನ ಸಮಸ್ಯೆಯಾಗದಂತೆ ಸಂಬAಧಿಸಿದ ಅಧಿಕಾರಿಗಳು ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಎಸ್‌ಪಿ ಪ್ರಕಾಶ ನಿಕ್ಕಂ, ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರ, ಜಿಲ್ಲಾ ಶಸ್ತçಚಿಕಿತ್ಸಕ ಡಾ.ವಿಜಯಶಂಕರ ಸೇರಿದಂತೆ ಸಂಬAಧಿಸಿದವರು ಉಪಸ್ಥಿತರಿದ್ದರು.

Latest Indian news

Popular Stories