ಹಣ ಉಳಿತಾಯ ಮಾಡಿ, ಸ್ವ ಸಹಾಯ ಸಂಘವನ್ನು ಬಲಿಷ್ಠ ಗೊಳಿಸಿ; ಪೌರಯುಕ್ತ ಹೆಚ್.ವೆಂಕಟೇಶ

ರಾಯಚೂರು, ಜು.೦೯, (ಕ.ವಾ):- ಪ್ರತಿಯೊಬ್ಬ ಸ್ತಿçÃಯರು ಸ್ವ ಉದ್ಯೋಗವನ್ನು ಕೈಗೊಳ್ಳುವ ಮೂಲಕ ಹಣ ಸಂಪಾದನೆಯನ್ನು ಮಾಡಿ ತಮ್ಮ ಕುಟುಂಬವನ್ನ ಸದೃಢಗೊಳಿಸಬೇಕೆಂದು ರಾಯಚೂರು ನಗರಸಭೆಯ ಪೌರಾಯುಕ್ತರಾದ ಹೆಚ್. ವೆಂಕಟೇಶ ಅವರು ಹೇಳಿದರು.

ಅವರು ಜು.೦೯ರ ಶುಕ್ರವಾರ ನಗರಸಭೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ, ನಗರಸಭೆ, ಲಿಡ್ ಬ್ಯಾಂಕ್ ಸಹಕಾರದೊಂದಿಗೆ ಡೇ-ನಲ್ಮ್ ಯೋಜನೆ ಅಡಿಯಲ್ಲಿ ರಚನೆಗೊಂಡಿರುವ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ವಿಮಾ ಸಪ್ತಾಹ ಕಾರ್ಯಕ್ರಮಕ್ಕೆ ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿ, ಮಾತನಾಡಿದರು.
ಉಳಿತಾಯ ಯೋಜನೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು, ಕಡಿಮೆ ದರದಲ್ಲಿ ವಿಮೆ ಪಾಲಿಸಿಗಳು ಬಂದಿದ್ದು, ಅವುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು. ಒಂದು ವರ್ಷಕ್ಕ ಅಲ್ಪ ಪ್ರಮಾಣದ ಹಣವನ್ನು ಪ್ರಧಾನ ಮಂತ್ರಿ ಸುರಕ್ಷ ವಿಮೆ ಯೋಜನೆ ಅಡಿಯಲ್ಲಿ ತೊಡಗಿಸಿದರೆ, ಆಕಸ್ಮಿಕವಾಗಿ ಸಾವು ಆದರೆ ಲಕ್ಷಂತಾರ ರೂಪಾಯಿ ಹಣ ಕುಟುಂಬಕ್ಕೆ ಸಂದಾಯವಾಗುತ್ತದೆ ಎಂದರು
ಪ್ರತಿಯೊಬ್ಬರು ಉಳಿತಾಯ ಖಾತೆಯ ಮೂಲಕ ಹಣ ಸಂದಾಯ ಮಾಡಬೇಕು, ನೀವು ಮಾಡಿಸಿದ ವಿಮೆ ನೀವು ಜಿವಂತವಿಲ್ಲದ ಸಮಯದಲ್ಲಿ ನಿಮ್ಮ ಕುಟುಂಬಕ್ಕೆ ಆಧಾರ ಸ್ತಂಭವಾಗುತ್ತದೆ. ಮಹಿಳೆಯರು ಹಣ ಉಳಿತಾಯ ಮಾಡಿ ವಿಮೆ ಮಾಡಿಸಿರಿ. ಮತ್ತು ತಮ್ಮ ಸ್ವ-ಸಹಾಯ ಸಂಘಗಳನ್ನು ಬಲಿಷ್ಠಗೊಳಿಸಬೇಕೆಂದು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆಯ ಶಿಕ್ಷಣ ವಿಭಾಗದ ಜಿಲ್ಲಾ ಸಂಚಾಲಕರಾದ ದಂಡಪ್ಪ ಬಿರಾದಾರ ಅವರು ಮಾತನಾಡಿ, ಸ್ತಿçÃಶಕ್ತಿ ದೇಶದ ಶಕ್ತಿ ಹೆಣ್ಣುಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಹಾಗೇ ಹಣ ಉಳಿತಾಯ ಮಾಡುವಲ್ಲಿ ಹೆಣ್ಣು ಮಕ್ಕಳ ಪಾತ್ರ ಅತ್ಯಂತ ಮಹತ್ವದಾಗಿದೆ. ಎಲ್ಲಾ ಸ್ತಿçÃಯರು ಒಟ್ಟಾಗಿ ಸೇರಿಕೊಂಡು ಸ್ವ-ಸಹಾಯ ಸಂಘವನು ರಚನೆ ಮಾಡಿಕೊಂಡು ಅದರಲ್ಲಿ ಲಾಭವನ್ನು ಪಡೆಯಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಲಿಡ್ ಬ್ಯಾಂಕ್ ಮ್ಯಾನೇಜರ್ ರಂಜಿತ್, ವೀಣಾ ರಾಜೇಶ್ವರಿ, ರಣಜಿತ್ ಕುಮಾರ, ಬಿ.ಎ ದೊಡ್ಡಮನಿ, ಗೋಪಾಲ ಸೇರಿದಂತೆ ನಗರದ ಸ್ತಿçà ಸ್ವ-ಸಹಾಯ ಸಂಘದ ವಿವಿಧ ಮಹಿಳಾ ಸದಸ್ಯರು ಭಾಗವಹಿಸಿದರು.

Latest Indian news

Popular Stories